ಚೀನಾ:- ತನ್ನ ಬೆರಳು ಕಚ್ಚಿದ ಇಲಿಯನ್ನು ಹಿಡಿದ ಯುವತಿಯೊಬ್ಬಳು ಸೇಡು ತೀರಿಸಿಕೊಳ್ಳುವುದಕ್ಕಾಗಿ ತಿರುಗಿಸಿ ಅದಕ್ಕೆ ಕಚ್ಚಿದ ಘಟನೆ ಚೀನಾದಲ್ಲಿ ನಡೆದಿದೆ.
ಕಳೆದ ತಿಂಗಳ 21ರಂದು ಈ ಘಟನೆ ನಡೆದಿದೆ. 18 ವರ್ಷದ ತರುಣಿಯ ಬೆರಳನ್ನು ಇಲಿಯೊಂದು ಕಚ್ಚಿ ಗಾಯಗೊಳಿಸಿದೆ. ಆಕೆ ಅಧ್ಯಯನ ನಡೆಸುತ್ತಿದ್ದ ವಿಶ್ವವಿದ್ಯಾಲಯದ ಆವರಣದಲ್ಲಿರು ವಸತಿ ನಿಲಯದಲ್ಲಿ ಈ ಘಟನೆ ನಡೆದಿದೆ.
ಇದರಿಂದ ಆಕ್ರೋಶಗೊಂಡ ಯುವತಿ ಇಲಿಯನ್ನು ದೂರ ಓಡಿಸುವ ಬದಲು ಅದನ್ನು ಜೀವಂತ ಹಿಡಿಯಲು ಯತ್ನಿಸಿದ್ದಳು. ಅಲ್ಲದೇ ಇಲಿಯನ್ನು ಹಿಡಿಯಲು ಯಶಸ್ವಿಯೂ ಆದ ಆಕೆ ಬಳಿಕ ಅದರ ತಲೆಯನ್ನು ಕಚ್ಚಿದ್ದಾಳೆ. ಇದರಿಂದ ಇಲಿಯ ತಲೆಯಲ್ಲಿ ಯುವತಿಯ ಹಲ್ಲಿನ ಗುರುತುಗಳಾಗಿದ್ದು, ಈಕೆ ಈ ಕೃತ್ಯವೆಸಗಿದ ಸ್ವಲ್ಪ ಹೊತ್ತಿನಲ್ಲೇ ಇಲಿ ಸತ್ತು ಹೋಗಿದೆ.
ಇಲಿಯನ್ನು ಕಚ್ಚಿ ಹಿಡಿದ ಪರಿಣಾಮ ಆಕೆಯ ಬಾಯಿಗೂ ಗಾಯವಾಗಿದ್ದು, ನಂತರ ಇದಕ್ಕಾಗಿ ಆಕೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ತೆಗೆದುಕೊಂಡಿದ್ದು, ಆರೋಗ್ಯವಾಗಿದ್ದಾಳೆ ಎಂದು ತಿಳಿದು ಬಂದಿದೆ