ಬೆಂಗಳೂರು : ರಾಮ ಭಕ್ತರರಿಗೆ ಭಯವನ್ನ ಹುಟ್ಟಿಹಾಕುವ ನಂಬರ್ ಒನ್ ಭಯೋತ್ಪಾದಕ ಬಿ.ಕೆ ಹರಿಪ್ರಸಾದ್ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಸಂಸದ ಡಿ.ವಿ. ಸದಾನಂದ ಗೌಡ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರು ಅವರು, ರಾಮ ಭಕ್ತರಿಗಲ್ಲ ರಕ್ಷಣೆ, ಮೊದಲು ಹರಿಪ್ರಸಾದ್ಗೆ ರಕ್ಷಣೆ ಕೊಡಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಮ ಭಕ್ತರು ಬಿ.ಕೆ. ಹರಿಪ್ರಸಾದ್ ಅವರನ್ನ ಎಲ್ಲಿ ಪುಡಿಪುಡಿ ಮಾಡ್ತಾರೋ ಗೊತ್ತಿಲ್ಲ. ಅವರಿಗೆ ಮೊದಲು ರಕ್ಷಣೆ ಕೊಡಬೇಕು. ಹರಿಪ್ರಸಾದ್ರನ್ನ ಮೊದಲು ಅರೆಸ್ಟ್ ಮಾಡಬೇಕು. ರಾಮ ಭಕ್ತರರಿಗೆ ಭಯವನ್ನ ಹುಟ್ಟಿಹಾಕುವ ನಂಬರ್ ಒನ್ ಭಯೋತ್ಪಾದಕ ಹರಿಪ್ರಸಾದ್. ಹೀಗಾಗಿ, ಅವರನ್ನ ಮೊದಲು ಬಂಧಿಸಿ ಎಂದು ಆಗ್ರಹಿಸಿದ್ದಾರೆ.
ಒಬ್ಬ ಜನಪ್ರತಿನಿಧಿಯಾಗಿ ಅವರು ಜನರಲ್ಲಿ ಭಯ ಮೂಡಿಸುತ್ತಿದ್ದಾರೆ. ಇವರು ಟೆರರಿಸ್ಟ್ ಮಾದರಿಯಲ್ಲಿ ಕಾಣುತ್ತಾರೆ. ಜನರಲ್ಲಿ ಭಾವನೆ ವ್ಯಕ್ತಪಡಿಸಿ ಪ್ರಚೋದನೆ ನೀಡ್ತಾ ಇದ್ದಾರೆ. ಹರಿಪ್ರಸಾದ್ ಮಾತಿನ ಮೂಲಕವಾದರೂ ಪ್ರಚೋದನೆ ಪಡೆದು ರೈಲಿಗೆ ಬೆಂಕಿ ಹಾಕೋಣ ಅಂತ ಕೆಲವರು ಯೋಚಿಸಬಹುದು ಎಂದು ಸದಾನಂದಗೌಡ ಹರಿಹಾಯ್ದಿದ್ದಾರೆ.