ರಾಯಚೂರು : ಅಯೋಧ್ಯ ಶ್ರೀ ರಾಮ ಜನ್ಮ ಭೂಮಿಯಲ್ಲಿ ಭವ್ಯ ರಾಮಮಂದಿರ ಲೋಕಾರ್ಪಣೆಗೆ ದಿನಗಣನೆ ಆರಂಭವಾಗಿರುವಾಗ ಶ್ರೀ ರಾಮ ಮಂದಿರಕ್ಕಾಗಿ ಹೋರಾಡಿದ 31 ವರ್ಷ ಹಳೆಯ ಪ್ರಕರಣವನ್ನು ಕೆದಕಿ ರಾಮಭಕ್ತನನ್ನು ಕಾಂಗ್ರೆಸ್ ಸರಕಾರ ಬಂಧಿಸಿದೆ, ಉಳಿದ ರಾಮ ಭಕ್ತರಿಗಾಗಿ ಪೋಲಿಸ್ ಇಲಾಖೆಯನ್ನು ಭೂ ಬಿಟ್ಟಿರುವ ಕಾಂಗ್ರೆಸ್ ನೇತೃತ್ವದ ಹಿಂದೂ ವಿರೋಧಿ ರಾಜ್ಯ ಸರಕಾರದ ನಡೆಯನ್ನು ಜಿಲ್ಲಾ ಭಾ.ಜ.ಪ ಹಾಗೂ ನಗರ ಶಾಸಕ ಶಿವರಾಜ್ ಪಾಟೀಲ್ ಅವರು ತೀವ್ರವಾಗಿ ಖಂಡಿಸಿದರು.
ದೇಶವೆಲ್ಲ ಶ್ರೀ ರಾಮ ಪ್ರಾಣ ಪ್ರತಿಷ್ಠಾಪನೆಯ ಸಂಭ್ರಮದಲ್ಲಿರುವಾಗ 31 ವರ್ಷಗಳ ಹಳೆಯ ಪ್ರಕರಣವನ್ನು ಕೆದಕಿರುವ ಇಂತಹ ವಿಕೃತ ಮನಸ್ಸಿನ ರಾಜ್ಯ ಸರಕಾರ ಸಮಸ್ತ ದೇಶದ ಹಿಂದುಗಳ ಭಾವನೆಗಳಿಗೆ ಹಾಗೂ ಶ್ರದ್ದೆಯ ಘಾಸಿ ಮಾಡಲು ಹೊರಟಿದ್ದು ಅತ್ಯಂತ ಹೇಯಕೃತ್ಯ, ಪದೇ ಪದೇ ತನ್ನ ಹಿಂದೂ ವಿರೋಧಿ ನೀತಿಗಳನ್ನು ಪ್ರದರ್ಶಿಸಿ ತನ್ನ ಓಲೈಕೆ ರಾಜಕಾರಣವನ್ನು ದೇಶದ ಸಮಸ್ತ ಸನತಾನಿಗಳು ಕ್ಷಮಿಸುವದಿಲ್ಲ, ಇಂತಹ ಕೃತ್ಯಗಳು ಕೈ ಬಿಟ್ಟು ಬಂಧಿಸಿದ ರಾಮ ಭಕ್ತರನ್ನು ಕೂಡಲೇ ಬಿಡುಗಡೆ ಮಾಡುವಂತೆ ರಾಯಚೂರು ಜಿಲ್ಲಾ ಭಾ.ಜ.ಪ ಹೋರಾಟದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.