ಹುಬ್ಬಳ್ಳಿ: ಗೋದ್ರಾ ರೀತಿಯಲ್ಲಿ ಘಟನೆ ರಾಜ್ಯದಲ್ಲಿ ನಡೆಯುತ್ತಿದೆ ಎಂದು ಬಿ.ಕೆ.ಹರಿಪ್ರಸಾದ ಹೇಳುವುದಾರೇ ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಏನು ಮಾಡುತ್ತಿದೆ ಎಂದು ಶಾಸಕ ಅರವಿಂದ ಬೆಲ್ಲದ ಪ್ರಶ್ನಿಸಿದರು. ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ ಅವರ ಗೋದ್ರಾದಲ್ಲಿ ಆದ ಘಟನೆಯಂತೆ ಇಲ್ಲಿಯೂ ಸೃಷ್ಟಿಸುತ್ತಿದ್ದಾರೆ ಎಂಬ ಹೇಳಿಕೆ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,
ಗೋದ್ರಾದಲ್ಲಿ ಕರಸೇವಕರ ಸುಟ್ಟವರು ಯಾರು ಎಂದು ಪ್ರಶ್ನಿಸಿದರ ಅವರು, ಮುಸ್ಲಿಂ ಅವರು ಹಿಂದೂಗಳ ಸುಟ್ಟರು. ಅದೇ ರೀತಿ ಆಗುವುದರೇ ಇಲ್ಲಿ ಸರ್ಕಾರ ಯಾಕೇ ಸುಮ್ಮನಿದೆ. ಹಿಂದೂಗಳ ರಕ್ಷಣೆ ಸರ್ಕಾರದ ಜವಾಬ್ದಾರಿಯಾಗಿದೆ ಎಂದರು. ರಾಜ್ಯದಲ್ಲಿ ಹಿಂದೂಗಳನ್ನು ಇಂತಹ ಹೇಳಿಕೆ ನೀಡುವ ಮೂಲಕ ಹೆದರಿಸುತ್ತಿರಾ? ಸರ್ಕಾರಕ್ಕೆ ಜವಾಬ್ದಾರಿ ಇಲ್ವಾ?ಹಿಂದೂಗಳ ಭಯಪಡಿಸುವುದು ಸರಿಯಲ್ಲ. ನಾವು ನೋಡುತ್ತೇವೆ ಎಂದು ಹರಿಹಾಯ್ದರು.