ಕಲಬುರಗಿ: ಅಯ್ಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ದಿನಗಣನೆ ಶುರುವಾಗ್ತಿದ್ದಂತೆ ಇತ್ತ ಕಲಬುರಗಿಯಲ್ಲಿ ಅಯ್ಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷಿತೆ ವಿತರಣೆ ಕಾರ್ಯಕ್ರಮವೂ ಜೋರಾಗಿ ಆಗಬೇಕೆಂದು ರಾಮ ಭಕ್ತರು ಶ್ರಮಿಸುತಿದ್ದಾರೆ..ಈ ಕುರಿತಂತೆ ಚಿಂಚೋಳಿಯ ಚಂದಾಪುರದಲ್ಲಿ ಇವತ್ತು ಶಾಸಕ ಅವಿನಾಶ್ ಜಾಧವ್ ನೇತ್ರತ್ವದಲ್ಲಿ ಪೂರ್ವ ಭಾವಿ ಸಭೆ ನಡೆಯಿತು..
ನೂರಾರು ರಾಮ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಅವಿನಾಶ್ ಜಾಧವ್ ಜನೆವರಿ 7 ರಂದು ಎಲ್ಲರ ಮನೆಗೆ ಮಂತ್ರಾಕ್ಷತೆ ವಿತರಣೆ ಮಾಡಬೇಕಿದೆ. ಅದಕ್ಕಾಗಿ ಪ್ರಭು ರಾಮನ ಭಕ್ತರೆಲ್ಲ ಸೇರಿ ಈ ಪುಣ್ಯಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಅಂದ್ರು.ಅಷ್ಟೇ ಅಲ್ಲ ಎಲ್ಲರ ಬಯಕೆಯಂತೆಇದೇ 22 ರಂದು ರಾಮ ಮಂದಿರ ಉದ್ಘಾಟನೆ ಆಗುತಿದೆ.. ಇದು ನಮ್ಮೆಲ್ಲರಿಗೂ ಹರ್ಷದ ಸಂಗತಿ ಅಂತ ತಿಳಿಸಿದ್ರು…