ಬೆಂಗಳೂರು: ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮ ಇದೊಂದು ಧಾರ್ಮಿಕ ಕಾರ್ಯಕ್ರಮ ಅಲ್ಲ ಬದಲಿಗೆ ರಾಜಕೀಯ ಕಾರ್ಯಕ್ರಮ ಎಂದು ಕಾಂಗ್ರೆಸ್ ನ ಹಿರಿಯ ರಾಜಕಾರಣಿ ಬಿ.ಕೆ ಹರಿಪ್ರಸಾದ್ ತಿಳಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ದೇಶದ ಯಾವುದೇ ಧಾರ್ಮಿಕ ಮುಖಂಡರುಗಳು ಈ ಉದ್ಘಾಟನಾ ಕಾರ್ಯಕ್ರಮವನ್ನು ನಡೆಸಿದ್ದರೇ ನಾವುಗಳು ಯಾವುದೇ ಪಕ್ಷಬೇದವಿಲ್ಲದೇ ಪಾಲ್ಗೊಳ್ಳುತ್ತಿದೆವು ಆದರೇ, ಇದೋಂದು ರಾಜಕೀಯ ಕಾರ್ಯಕ್ರಮ ಎಂದರು.
ರಾಮಮಂದಿರ ವಿಚಾರಕ್ಕೆ ಬಿಜೆಪಿ – ಕಾಂಗ್ರೆಸ್ ಮಧ್ಯ ಜಟಾಪಟಿ: ಸಿಎಂಗೆ ಆಹ್ವಾನವಿಲ್ಲದಿದ್ದಕ್ಕೆ ಆಕ್ರೋಶ!
ನರೇಂದ್ರ ಮೋದಿ ಹಾಗು ಅಮಿತ್ ಷಾ ಯಾವುದೇ ಧಾರ್ಮಿಕ ಗುರುಗಳಲ್ಲ ಅವರು ರಾಜಕಾರಣಿಗಳು, ಇದೊಂದು ರಾಜಕೀಯ ಕಾರ್ಯಕ್ರವಾಗಿರುವುದರಿಂದ ಉನ್ಮಾದ ಮಾಡುವುದು ಒಳ್ಳೆಯದಲ್ಲ, ಕರ್ನಾಟಕ ಸರ್ಕಾರ ಎಲ್ಲಾ ರೀತಿಯ ಕಟ್ಟೆಚ್ಚರಗಳನ್ನು ಕೈಗೊಳ್ಳಬೇಕು, ಈ ಹಿಂದೆ ಇಂಥದ್ದೇ ಸಂದರ್ಭದಲ್ಲಿ ಕರಸೇವರಕರ ಹತ್ಯೆ, ಗೋದ್ರಾ ಹತ್ಯಾಕಾಂಡ ನಡೆದಿತ್ತು.
ಕರ್ನಾಟಕದಲ್ಲೂ ಅದೇ ರೀತಿಯ ವಾತವರಣ ಸೃಷ್ಟಿಸಲು ಪ್ರಯತ್ನ ನಡೆಯುತ್ತದೇ ಆದ್ದರಿಂದ ರಾಜ್ಯದಿಂದ ಯಾರ್ಯಾರು ಅಯೋಧ್ಯೆಗೆ ಹೋಗ್ತಾರೋ ಎಲ್ಲರಿಗೂ ಸೂಕ್ತ ಭದ್ರತೆ ಕಲ್ಪಿಸಬೇಕು ಇಲ್ಲವಾದಲ್ಲಿ ಮತ್ತೊಂದು ಗೋದ್ರಾ ಹತ್ಯಾಕಾಂಡ ನೋಡಬೇಕಾಗುತ್ತದೆ ಎಂದು ಅವರು ಹೇಳಿದರು.