ಚಾಮರಾಜನಗರ: ಪವಾಡ ಪುರುಷ ನೆಲೆಸಿರುವ ಮಲೈ ಮಹದೇಶ್ವರ ಬೆಟ್ಟಕ್ಕೆ ಹೊಸ ವರ್ಷದಲ್ಲಿ ನಾನಾ ಭಾಗಗಳಿಂದ ಸಾವಿರಾರು ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದು ವಿವಿಧ ಉತವಾದಿಗಳು, ಹಾಗೂ ಸೇವೆಗಳಿಂದ ಎರಡು ದಿನದಲ್ಲಿ 32 ಲಕ್ಷ ಆದಾಯ ಬಂದಿದೆ. ಗಡಿ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿರುವ ಮಲೈಮಹದೇಶ್ವರಬೆಟ್ಟದಲ್ಲಿ ನೂತನ ಹೊಸ ವರ್ಷದ ಡಿಸೆಂಬರ್ 31 ಹಾಗೂ ಜನವರಿ 1 ರಂದು ಹೊಸ ವರ್ಷ ಆಚರಣೆಗೆ ಆಗಮಿಸಿದ್ದ ಲಕ್ಚಾಂತರ ಭಕ್ತರಿಂದ ಈ ಆದಾಯ ಬಂದಿದೆ.
ಮಲೆ ಮಹದೇಶ್ವರ ಬೆಟ್ಟಕ್ಕೆ ಭಾನುವಾರ ಹಾಗೂ ಸೋಮವಾರವು ಕೂಡ ಸಾವಿರಾರು ಜನ ಭಕ್ತರು ಆಗಮಿಸಿ ವಿವಿಧ ಉತ್ಸವ, ಸೇವೆಗಳು, ಸೇರಿದಂತೆ ಮಾಹಿತಿ ಕೇಂದ್ರ, ಲಾಡು ಪ್ರಸಾದ, ತೀರ್ಥ ಪ್ರಸಾದ, ಬ್ಯಾಗ್ ಮಾರಾಟ, ಪಾರ್ಕಿಂಗ್, ಮಿಶ್ರ ಪ್ರಸಾದ, ಅಕ್ಕಿ ಸೇವೆ, ಪುದುವಟ್ಟು, ವಿಶೇಷ ಪ್ರವೇಶ ಶುಲ್ಕಗಳಿಂದ 32.75.294, ರೂಪಾಯ ಆದಾಯ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ ಬಂದಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ತಿಳಿಸಿದ್ದಾರೆ.