ಹಿರಿಯೂರು : ಮನೆಯ ಇ-ಸ್ವತ್ತು ಮಾಡಿಸಿಕೊಡಲು, ಲಂಚಕ್ಕೆ ಬೇಡಿಕೆಯಿಟ್ಟು 5 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಪಕ್ಷೇತರ ನಗರಸಭೆ ಸದಸ್ಯ ಡಿ ಸಣ್ಣಪ್ಪ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಗರದಲ್ಲಿ ನಡೆದಿದೆ. ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಬಳಿ ನಗರಸಭೆ ಪಕ್ಷೇತರ ಸದಸ್ಯ ಡಿ. ಸಣ್ಣಪ್ಪ ಅವರು ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದು ಅವರಿಬ್ಬರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
Side Effects of Earphone: ಫುಲ್ ಟೈಂ ಇಯರ್ ಫೋನ್ ಬಳಸ್ತೀರಾ..? ಆರೋಗ್ಯ ಸಮಸ್ಯೆ ಒಂದೆರಡಲ್ಲ
ಪಿ.ನಟರಾಜು ಅವರ ಮನೆಯ ಇ-ಸ್ವತ್ತಿಗಾಗಿ ಲಂಚಕ್ಕೆ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದಾರೆ. ಮಂಗಳವಾರ ಬೆಳಿಗ್ಗೆ ಲಂಚ ಸ್ವೀಕರಿಸುವಾಗ ಹಿರಿಯೂರು ಬಸ್ ನಿಲ್ದಾಣದ ಬಳಿ ವಶಕ್ಕೆ ಪಡೆದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.