ಧಾರವಾಡ: 31 ವರ್ಷದ ಹಿಂದಿನ ಕೇಸ್ನ್ನು ಮತ್ತೆ ಓಪನ್ ಮಾಡಿಸುವ ಮುಖಾಂತರ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.
ಧಾರವಾಡದಲ್ಲಿ ಮಾತನಾಡಿದ ಅವರು, 1992ರಲ್ಲಿ ರಾಮಮಂದಿರಕ್ಕಾಗಿ ಹುಬ್ಬಳ್ಳಿಯಲ್ಲಿ ಹೋರಾಟ ನಡೆದಿತ್ತು. ಆ ಸಮಯದಲ್ಲಿ ಕೆಲವು ಕೇಸ್ಗಳು ಆಗಿದ್ದವು. 32 ವರ್ಷದ ಹಿಂದಿನ ಪ್ರಕರಣ ಇದಾಗಿದೆ. ಆದರೆ, ಈಗ ಅದನ್ನು ರೀ ಓಪನ್ ಮಾಡಿಸುವ ಮೂಲಕ ಕಾಂಗ್ರೆಸ್ ದುಷ್ಕೃತ್ಯ ಮೆರೆಯುತ್ತಿದೆ ಎಂದರು.
ಈ ಹಿಂದೆ ಡಿಜೆ ಹಳ್ಳಿ, ಕೆಜೆ ಹಳ್ಳಿ ಹಾಗೂ ಹುಬ್ಬಳ್ಳಿಯಲ್ಲಿ ಗಲಾಟೆ ಆಗಿತ್ತು. ಹಳೇ ಹುಬ್ಬಳ್ಳಿ ಗಲಾಟೆಯಲ್ಲಿ ಇನ್ಸ್ಪೆಕ್ಟರ್ ಅವರನ್ನು ಕೊಲ್ಲಲು ಹೋಗಿದ್ದರು. ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲು ಹೋಗಿದ್ದರು. ಪಿಎಫ್ಐನಿಂದಲೂ ಗಲಾಟೆ ಆಗಿತ್ತು. ಅವರನ್ನೆಲ್ಲ ಇವರು ಖುಲಾಸೆ ಮಾಡುತ್ತಾರೆ. ಆದರೆ, 31 ವರ್ಷದ ಹಿಂದಿನ ಕೇಸ್ನ್ನು ಅನಾವಶ್ಯಕವಾಗಿ ಓಪನ್ ಮಾಡಿದ್ದಾರೆ ಎಂದರು.
Side Effects of Earphone: ಫುಲ್ ಟೈಂ ಇಯರ್ ಫೋನ್ ಬಳಸ್ತೀರಾ..? ಆರೋಗ್ಯ ಸಮಸ್ಯೆ ಒಂದೆರಡಲ್ಲ
ಒಬ್ಬ ಆಟೊ ಓಡಿಸಿ ಜೀವನ ನಡೆಸುವಾತ. ಅಂತಹ ಬಡವನ ಮೇಲಿನ ಕೇಸ್ ಓಪನ್ ಮಾಡಿಸಿದ್ದಾರೆ. ವಯಸ್ಸಾದವರ ಬಂಧನ ಮಾಡಿದ್ದಾರೆ. ಬಿಜೆಪಿ ಮತ್ತು ಹಿಂದೂ ಕಾರ್ಯಕರ್ತರನ್ನು ಇವರು ಟಾರ್ಗೆಟ್ ಮಾಡುತ್ತಿದ್ದಾರೆ. ಇದರ ವಿರುದ್ಧ ಹುಬ್ಬಳ್ಳಿಯಲ್ಲಿ ದೊಡ್ಡ ಹೋರಾಟ ನಡೆಯಲಿದೆ. ವಿಪಕ್ಷ ನಾಯಕ ಆರ್.ಅಶೋಕ ನೇತೃತ್ವದಲ್ಲಿ ಶಹರ ಠಾಣೆ ಎದುರು ಪ್ರತಿಭಟನೆ ಮಾಡುತ್ತೇವೆ. ಪೊಲೀಸ್ ಇನ್ಸ್ಪೆಕ್ಟರ್ ಅವರನ್ನು ಅಮಾನತ್ತು ಮಾಡಬೇಕು ಎಂಬುದು ನಮ್ಮ ಒತ್ತಾಯ ಎಂದರು.
ಸಿದ್ದರಾಮಯ್ಯ ನಮಗೆ ರಾಮ ಇದ್ದಂತೆ ಎಂಬ ಆಂಜನೇಯ ಹೇಳಿಕೆಗೆ ಪ್ರತಿಕ್ರಿಯಿಸಿದ ಬೆಲ್ಲದ, ಇಡೀ ದೇಶಕ್ಕೆ ಮರ್ಯಾದಾ ಪುರುಷೋತ್ತಮ ರಾಮನೊಬ್ಬನೇ. ಆದರೆ, ಕಾಂಗ್ರೆಸ್ನವರಿಗೆ ಬೇರೆ ರಾಮ ಇದ್ದಾರೆ. ಸಿದ್ದರಾಮಯ್ಯ, ಆ ರಾಮಯ್ಯ ಈ ರಾಮಯ್ಯ ಎಂದು ಬಹಳಷ್ಟು ಜನ ಇದ್ದಾರೆ. ಆದರೆ, ದೇಶದ ಜನತೆಗೆ ಶ್ರೀರಾಮನೊಬ್ಬನೇ ಎಂದರು.