ತುಮಕೂರು: ಚಿರತೆ ದಾಳಿಯಿಂದ ಕೋಳಿ ತಪ್ಪಿಸಿಕೊಂಡ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಅಡಿಕೇಕೆರೆ ಗ್ರಾಮದಲ್ಲಿ ನಡೆದಿದೆ. ಕೋಳಿಯನ್ನುಹೊತ್ತೊಯಲು ಚಿರತೆ ಯತ್ನಸಿದ ವಿಡಿಯೋ ಸಿಸಿಟಿಯಲ್ಲಿ ಸೆರೆಯಾಗಿದೆ. ತಡರಾತ್ರಿ 10.55ಕ್ಕೆ ತೋಟದ ಮನೆಯ ಹತ್ತಿರ ಚಿರತೆ ದಾಳಿ ಮಾಡಿತ್ತು.
ಗ್ರಾಮದ ನಳಿನ ಎಂಬುವರಿಗೆ ಸೇರಿದ ತೋಟದ ಬಳಿ ಚಿರತೆ ಕಾಣಿಸಿಕೊಂಡಿದೆ. ಪದೇ ಪದೇ ಅಡಿಕೇಕೆರೆ, ಇಡಗೂರು ಗ್ರಾಮಗಳ ಸುತ್ತಮುತ್ತ ಚಿರತೆ ಪ್ರತ್ಯಕ್ಷವಾಗುತ್ತಿದ್ದು, ಚಿರತೆ ಕಾಟಕ್ಕೆ ಗ್ರಾಮಸ್ಥರು ನಲುಗಿದ್ದಾರೆ. ಕೂಡಲೇ ಚಿರತೆ ಸೆರೆಹಿಡಿಯುವಂತೆ ಅರಣ್ಯಧಿಕಾರಿಗಳಿಗೆ ಗ್ರಾಮಸ್ಥರ ಮನವಿ ಮಾಡಿಕೊಂಡಿದ್ದಾರೆ.