ಚೆನ್ನೈ:- ತಮಿಳುನಾಡಿನ ಥೇಣಿ ಜಿಲ್ಲೆಯಲ್ಲಿ 500 ವರ್ಷ ಹಳೆಯ ಕನ್ನಡ ಶಾಸನ ಪತ್ತೆಯಾಗಿದೆ.
ಥೇಣಿ ಜಿಲ್ಲೆಯ ಸಿಲ್ವಾರಪಟ್ಟಿಯಲ್ಲಿರುವ ವಿನಾಯಕ ದೇವಸ್ಥಾನದಲ್ಲಿ 500 ವರ್ಷಗಳಷ್ಟು ಹಳೆಯದಾದ ಕನ್ನಡ ಭಾಷೆಯ ಶಾಸನ ಪತ್ತೆಯಾಗಿದೆ. ಈ ದೇವಾಲಯದ ನೆಲಮಾಳಿಗೆಯಲ್ಲಿ ರಾಮನಾಥಪುರಂ ಪುರಾತತ್ವ ಸಂಶೋಧನಾ ಸಂಸ್ಥೆಯ ಅಧ್ಯಕ್ಷ ರಾಜಗುರು ನೇತೃತ್ವದಲ್ಲಿ ಸಂಶೋಧಕರು ತನಿಖೆ ನಡೆಸಿದಾಗ ಈ ಶಾಸನ ಪತ್ತೆಯಾಗಿದೆ. ಶಾಸನ ಬರೆದಿರುವ ಕಲ್ಲು 3 ಅಡಿ ಎತ್ತರ, 2.5 ಅಡಿ ಅಗಲ ಮತ್ತು ಅರ್ಧ ಅಡಿ ದಪ್ಪವಿದೆ. ಅಲ್ಲಿ ಗೋಡೆಗೆ ಶಾಸನವನ್ನು ಅಂಟಿಸಲಾಗಿದೆ. ಕನ್ನಡ ಭಾಷೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ, ಬೋರ್ಡ್ ಬದಲಾವಣೆಗೆ ಡೆಡ್ಲೈನ್ ನೀಡಿದ ಸರ್ಕಾರ- ಇಲ್ಲಿದೆ ಮಾಹಿತಿ ಶಾಸನದಲ್ಲಿ ಇರುವುದೇನು? ಈ ಕಲ್ಲಿನ ಮೇಲ್ಭಾಗದಲ್ಲಿ ಶಿವಲಿಂಗ, ಸೂರ್ಯ ಮತ್ತು ಚಂದ್ರರನ್ನು ಕೆತ್ತಲಾಗಿದೆ. ಅವುಗಳ ಕೆಳಗೆ ‘ಶ್ರೀ ಹಾಲಪಯ್ಯ ಗೌಡರ ಗ್ರಾಮ ವೇಲ್ಪರರ ಪಟ್ಟ’ ಎಂದು ಬರೆಯಲಾಗಿದೆ.
ಪುರಾತತ್ವಶಾಸ್ತ್ರಜ್ಞರಾದ ನೂರ್ಸಕಿಪುರಂ ಶಿವಕುಮಾರ್, ಶಿಕ್ಷಕ ಬೋಧಕ ಮುರುಗೇಶಪಾಂಡಿಯನ್, ಅರುಪ್ಪುಕ್ಕೊಟ್ಟೈ ಎಸ್ಪಿಕೆ, ಕಾಲೇಜು ಇತಿಹಾಸ ಪ್ರಾಧ್ಯಾಪಕ ರಾಜಪಾಂಡಿ ಅವರು ಪರೀಕ್ಷೆ ಮಾಡಿದ್ದು ಶಾಸನವು 500 ವರ್ಷಗಳಷ್ಟು ಹಳೆಯದು ಎಂದು ದೃಢಪಡಿಸಿದ್ದಾರೆ. ಶ್ರೀಹಾಲಪಯ್ಯ ಆಳ್ವಿಕೆಯ ವ್ಯಾಪ್ತಿಯ ಗ್ರಾಮವಾಗಿದ್ದು, ಈ ಶಾಸನವೇ ಈ ಗ್ರಾಮದ ಗಡಿಗಲ್ಲು ಎಂದು ಹೇಳಿದ್ದಾರೆ. 16 ನೇ ಶತಮಾನದಲ್ಲಿ, ಈ ಪ್ರದೇಶವು ಶ್ರೀಹಾಲಪಯ್ಯ ಎಂಬ ಪುಟ್ಟ ರಾಜನ ನಿಯಂತ್ರಣದಲ್ಲಿತ್ತು. ಈ ಶಾಸನವು ವಿಜಯನಗರ ಅರಸರ ಕಾಲದಲ್ಲಿ ಕರ್ನಾಟಕದಿಂದ ಸಿಲ್ವಾರಪಟ್ಟಿ ಪ್ರದೇಶಕ್ಕೆ ವಲಸೆ ಬಂದಿರಬಹುದೆಂದು ಸೂಚಿಸುತ್ತದೆ. ಅವನೊಂದಿಗೆ ನೆಲೆಸಿದ ಜನರು ಈ ದೇವಾಲಯವನ್ನು ಪುನರ್ನಿರ್ಮಿಸಿ ಅಲ್ಲಿ ಪೂಜೆ ಸಲ್ಲಿಸಿದ್ದಾರೆ. ಅದಕ್ಕೆ ಈ ಶಾಸನವೇ ಸಾಕ್ಷಿ ಎಂದು ಹೇಳಲಾಗಿದೆ