ಈ ಬಾರಿ ಶತಾಯಗತಾಯ ಗೆಲ್ಲಲೇ ಬೇಕು ಅಂತಾ ಪಣತೊಟ್ಟಿರುವ ಆರ್ಸಿಬಿ ಈ ಬಾರಿ ಹೊಸ ನಾಯಕನೊಂದಿಗೆ ಕಣಕ್ಕೆ ಇಳಿಯಲಿದೆ.
ಟೀಂ ಇಂಡಿಯಾದ ನಾಯಕತ್ವದಿಂದ ಕೆಳಗೆ ಇಳಿಯುತ್ತಿದ್ದಂತೆಯೇ ವಿರಾಟ್ ಕೊಹ್ಲಿ ಆರ್ಸಿಬಿ ತಂಡದ ನಾಯಕತ್ವವನ್ನೂ ತೊರೆದಿದ್ದರು. ವಿರಾಟ್ ಕೊಹ್ಲಿ ನಂತರ ಫಾಪ್ ಡು ಪ್ಲೆಸಿಸ್ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ನಾಯಕತ್ವ ವಹಿಸಿಕೊಂಡಿದ್ದರು.
ಐಪಿಎಲ್ 2022 ರ ಋತುವಿನ ನಂತರ ವಿರಾಟ್ ಕೊಹ್ಲಿನಾಯಕತ್ವ ತ್ಯೆಜಿಸಿದ ಬೆನ್ನಲ್ಲೇ ಆರ್ಸಿಬಿ ನಾಯಕನಾಗಿರುವ ಫಾಪ್ ಡು ಪ್ಲೆಸಿಸ್ ನಾಯಕನಾಗಿ ಹೇಳಿಕೊಳ್ಳುವ ಸಾಧನೆಯನ್ನು ಮಾಡಿಲ್ಲ. ವಿರಾಟ್ ಕೊಹ್ಲಿ 2023 ರ ಋತುವಿನಲ್ಲಿ ಬ್ಯಾಟಿಂಗ್ ಮೇಲೆಗೆ ಹೆಚ್ಚು ಗಮನ ಹರಿಸಿದ್ದರೂ ಕೂಡ ಆರ್ಸಿಬಿ ಕಳೆದ ಸಾಲಿನಲ್ಲಿ ರಲ್ಲಿ RCB 14 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಮಾತ್ರವೇ ಜಯಿಸಿತ್ತು.
ಕಳೆದ ಬಾರಿಯೂ ಐಪಿಎಲ್ ಕಪ್ ಗೆಲ್ಲಲು ಸಾಧ್ಯವಾಗದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲೀಗ ಮತ್ತೆ ನಾಯಕತ್ವದ ಪ್ರಶ್ನೆ ಎದ್ದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳೆದ 16 ಸೀಸನ್ಗಳಲ್ಲಿ ಪ್ರಶಸ್ತಿ ಗೆಲ್ಲುವ ಕನಸು ಮುಂದುವರೆದಿದೆ. ಆರ್ಸಿಬಿ ಪ್ರತೀ ಬಾರಿಯೂ ಈ ಸಲ ಕಪ್ ನಮ್ದೆ ಎಂಬ ಘೋಷಣೆ ಅಭಿಯಾನ ಆರಂಭಿಸುತ್ತಿದೆ. ಅಭಿಯಾನ ಆರಂಭಿಸಿ 7 ವರ್ಷಗಳೇ ಕಳೆದರೂ ಕೂಡ ಇಂದಿಗೂ ಐಪಿಎಲ್ ಟ್ರೋಫಿ ಗೆದ್ದಿಲ್ಲ.
ಇದೇ ಕಾರಣದಿಂದಲೇ ಈ ಬಾರಿ ಐಪಿಎಲ್ನಲ್ಲಿ ಫಾಪ್ ಡುಪ್ಲೆಸಿಸ್ ನಾಯಕತ್ವದಲ್ಲಿ ಆರ್ಸಿಬಿ ಕಣಕ್ಕೆ ಇಳಿಯುವುದು ಅನುಮಾನ. ಫಾಫ್ ನಾಯಕತ್ವದಲ್ಲಿ ಒಟ್ಟು 27 ಪಂದ್ಯಗಳಲ್ಲಿ ಆರ್ಸಿಬಿ ಕೇವಲ 14 ಪಂದ್ಯಗಳನ್ನು ಗೆದ್ದಿದ್ದು, 13 ಪಂದ್ಯಗಳಲ್ಲಿ ಸೋಲನ್ನು ಕಂಡಿದೆ. ಕಳೆದ ಬಾರಿ ಫಾಪ್ ಡು ಪ್ಲೆಸಿಸ್ ಅನುಪಸ್ಥಿತಿಯಲ್ಲಿ ವಿರಾಟ್ ಕೊಹ್ಲಿ ಆರ್ಸಿಬಿ ತಂಡವನ್ನು ಮುನ್ನೆಡೆಸಿದ್ದರು.