ಬಿಗ್ ಬಾಸ್ ಕನ್ನಡ ನಂಬರ್ ವನ್ ಶೋ ಆಗಿ ಕನ್ನಡಿಗರ ಮನಗೆದ್ದಿದೆ, ಒಂದಲ್ಲ ಒಂದು ಗಲಾಟೆ, ವಿವಾದಗಳನ್ನು ಸೃಷ್ಟಿಸುತ್ತಾ ಸದ್ದು ಮಾಡುತ್ತಿರುವ ಈ ಶೋದಲ್ಲಿ ಪ್ರಸ್ತುತ ಮೂವರು ಸ್ಪರ್ಧಿಗಳ ಮಧ್ಯೆ ಭಾರೀ ಪೈಪೋಟಿ ಇದ್ದಂತೆ ಕಾಣುತ್ತಿದೆ. ಅವರು ಬೇರಾರೂ ಅಲ್ಲ, ಕಾರ್ತಿಕ್ ಮಹೇಶ್, ಸಂಗೀತಾ ಶೃಂಗೇರಿ ಮತ್ತು ಪ್ರತಾಪ್.
ಈ ಮೂವರಲ್ಲಿ ಒಬ್ಬರಿಗೆ ಹೆಚ್ಚು ಫ್ಯಾನ್ ಫಾಲೋವಿಂಗ್ ಇದ್ದಂತೆ ತೋರುತ್ತಿದೆ. ಸಂಗೀತಾ ಈ ಹಿಂದೆ ಮಾಡಿದ್ದ ತಪ್ಪಿನಿಂದಾಗಿ ಸುಮಾರು 13 ಸಾವಿರದಷ್ಟು ಫಾಲೋವರ್ಸ್’ನ್ನು ಕಳೆದುಕೊಂಡಿದ್ದರು. ಆದರೆ ಆ ಬಳಿಕ ಫೀನಿಕ್ಸ್ ಹಕ್ಕಿಯಂತೆ ಎದ್ದುಬಂದ ಸಂಗೀತಾ ಸದ್ಯ ಕರುನಾಡಿನ ಅನೇಕರ ಮೆಚ್ಚಿನ ಸ್ಪರ್ಧಿ ಎಂದೆನಿಸಿಕೊಳ್ಳುತ್ತಿದ್ದಾರೆ.
ಇನ್ನು ಡ್ರೋಣ್ ಪ್ರತಾಪ್ ಬಗ್ಗೆ ಅನೇಕರು ತಮ್ಮ ಅಭಿಪ್ರಾಯವನ್ನು ಬದಲಾಯಿಸಿಕೊಂಡು, ತಪ್ಪಿನ ಅರಿವಾಗಿ ಪಶ್ಚಾತಾಪ ಪಟ್ಟ ಯುವಕನಿಗೆ ಒಂದೊಳ್ಳೆ ಅವಕಾಶ ನೀಡಬೇಕು ಎನ್ನುತ್ತಾ ಅನೇಕರು ಸಪೋರ್ಟ್ ಮಾಡುತ್ತಿದ್ದಾರೆ.
ಕಾರ್ತಿಕ್ ಮಹೇಶ್ ಇವರಿಬ್ಬರಿಗಿಂತ ಕೊಂಚ ವಿಭಿನ್ನ. ತನ್ನ ತಾಳ್ಮೆಯಿಂದಲೇ ಸದ್ದು ಮಾಡಿದ್ದ ಕಾರ್ತಿಕ್ ಮೊದಲಿನಿಂದಲೂ ತನ್ನ ಸ್ವಂತ ಆಟವನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಇದೇ ಕಾರಣದಿಂದ ಜನರಿಗೆ ಇವರೇ ಅಚ್ಚುಮೆಚ್ಚು ಆದಂತಿದೆ. ಅಷ್ಟೇ ಅಲ್ಲದೆ, ಇವರಿಗೆ ಅತಿ ಹೆಚ್ಚು ಫ್ಯಾನ್ ಫಾಲೋವರ್ಸ್ ಇರೋದು ಗೋಚರಿಸುತ್ತಿದೆ.