ಗದಗ: ನಡೆದಾಡುವ ದೇವರೆಂದೇ ಪ್ರಸಿಧ್ಧರಾಗಿರುವ ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಪ್ರಥಮ ಪುಣ್ಯ ಸ್ಮರಣೋತ್ಸವವನ್ನು ಗದಗ ನಗರದ ಆದಿತ್ಯಾ ನಗರದಲ್ಲಿ ಶ್ರಧ್ಧಾ ಭಕ್ತಿಯಿಂದ ಆಚರಣೆ ಮಾಡಲಾಯಿತು.
ಓಣಿಯ ಜನರೆಲ್ಲಾ ಸೇರಿಕೊಂಡು ಶ್ರೀ ಸಿಧ್ದೇಶ್ವರ ಶ್ರೀಗಳ ಭಾವಚಿತ್ರಕ್ಕೆ ಜ್ಯೋತಿ ಬೆಳಗೋ ಮೂಲಕ ಪೂಜೆ ಸಲ್ಲಿಸಿದ್ರು. ಇದೇ ಸಂದರ್ಭದಲ್ಲಿ ಅವರು ಹಾಕಿಕೊಟ್ಟ ದಾರಿಯಲ್ಲೆ ನಡೆಯೋ ಮೂಲಕ ಮಾದರಿ ಸಮಾಜ ಕಟ್ಟುವೆಂದ್ರು.