ವಿಜಯಪುರ: ಕಾಂಗ್ರೆಸ್ ಸರ್ಕಾರ ಐಸಿಸ್ ಸರ್ಕಾರ ಮಾದರಿ ಸರ್ಕಾರ ನಡೆಸುತ್ತಿದೆ, ಸೋನಿಯಾ ರಾಹುಲ್ ಖುಷಿ ಪಡಿಸಲು ರಾಮಮಂದಿರ ಕುರಿತು ವಿರೋಧ ಹೇಳಿಕೆಯನ್ನಾ ಕಾಂಗ್ರೆಸ್ ಮುಖಂಡರು ನೀಡುತ್ತಿದ್ದಾರೆ ಎಂಬ ಪ್ರಹ್ಲಾದ ಜೋಶಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ನಗರದ ಬಿ ಎಲ್ ಡಿ ಇ ಕ್ಯಾಂಪಸ್ ನ ಹೆಲಿಪ್ಯಾಡ್ ಬಳಿ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಪ್ರತಿಕ್ರಿಯೇ ನೀಡಿದರು.
ನಾವು ವಿಜಯಪುರದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮಿಜಿ ಗುರು ನಮನ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದೇವೆ. ಕೇಂದ್ರ ಸಚಿವರು ಐಸಿಸ್ ಮಾದರಿ ಸರ್ಕಾರ ಎಂಬ ಹೇಳಿಕೆ ಸರಿಯಲ್ಲ. ಕಳೆದ ಐದು ವರ್ಷ ಬಿಜೆಪಿ ಸರ್ಕಾರ ಯಾವ ರೀತಿ ಸರ್ಕಾರ ನಡೆಸಿದೆ ಎಲ್ಲರಿಗೂ ಗೊತ್ತು. ಹಿಜಾಬ್, ಅಜಾನ್, ಹಲಾಲ್ ವಿಚಾರಗಳನ್ನು ನಡೆಸಿದರು. ಆಡಳಿತ ಯಂತ್ರ ಕೈಗೆ ತೆಗೆದುಕೊಂಡರು. ಆದ್ದರಿಂದಲೇ ಬಿಜೆಪಿಯವರಿಗೆ ರಾಜ್ಯದ ಜನ ಪಾಠ ಕಲಿಸಿ ಮನೆಗೆ ಕಳಿಹಿಸಿದ್ದಾರೆ ಎಂದರು.
ನಮ್ಮ ಸರ್ಕಾರ ಬಸವಾದಿ ಶರಣರ ಸರ್ಕಾರ. ಸರ್ವಜನಾಂಗದ ಶಾಂತಿ ತೋಟ ಎಂಬಂತೆ ಕೆಲಸ ಮಾಡುತ್ತಿದ್ದೇವೆ. ನಾವು ಅನ್ನ ಭಾಗ್ಯ ಕ್ಷೀರ ಭಾಗ್ಯ ನೀಡಿದ್ದೇವೆ, ಐದು ಗ್ಯಾರಾಂಟಿ ಕೊಟ್ಟಿದ್ದೇವೆ. ಅಚ್ಚೇ ದಿನ್ ಎಂದರು ಉದ್ಯೋಗ ಕೊಡೋದಾಗಿ ಹೇಳಿದ್ದರು. ರೈತರ ಅದಾಯ ದ್ವಿಗುಣವೆಂದು ಹೇಳಿದ್ದರು ಆದರೆ ಯಾವುದೇ ಈಡೇರಿಸಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.