ಬೆಂಗಳೂರು: ಹುಬ್ಬಳ್ಳಿಯ ಹಿಂದೂ ಪರ ಸಂಘಟನೆ ಕಾರ್ಯಕರ್ತರನ್ನ ಬಂಧಿಸಿರುವ ಸರ್ಕಾರದ ಕ್ರಮದ ವಿರುದ್ಧ ಸಮರ ಸಾರಲು ಬಿಜೆಪಿ ಮುಂದಾಗಿದೆ. ಹಿಂದೂ ವಿರೋಧಿ ಸರ್ಕಾರ ಅಂತ ನಾಳೆ ರಾಜ್ಯಾದ್ಯಂತ ದೊಡ್ಡ ಮಟ್ಟದ ಹೋರಾಟಕ್ಕೆ ರಾಜ್ಯಾಧ್ಯಕ್ಷ ವಿಜಯೇಂದ್ರ ಕರೆ ಕೊಟ್ಟಿದ್ದಾರೆ.
ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮರಿಹುಲಿ ಕರ್ನಾಟಕದಲ್ಲಿ ರೋದು ಹಿಂದೂ ವಿರೋಧಿ ಸರ್ಕಾರ. ತಾವು ಅಧಿಕಾರಕ್ಕೆ ಬಂದಾಗಲೆಲ್ಲ ಹಿಂದೂ ವಿರೋಧಿ ಎಂಬುದನ್ನು ಈ ಸರ್ಕಾರ ಜನತೆಗೆ ಪದೇಪದೇ ನೆನಪು ಮಾಡುತ್ತಿದೆ.
Sri Ram Mandir: ಅಯೋಧ್ಯೆ ಶ್ರೀರಾಮನ ಅಭಿಷೇಕಕ್ಕೆ ನೇಪಾಳದಿಂದ ಬರಲಿದೆ 16 ಪವಿತ್ರ ನದಿಗಳ ನೀರು..!
ರಾಮಮಂದಿರದ ಉದ್ಘಾಟನೆ ಸಮಾರಂಭ ಸನ್ನಿಹಿತವಾಗುವ ಹೊತ್ತಿನಲ್ಲೇ ಹುಬ್ಬಳ್ಳಿಯ 31 ವರ್ಷದ ಹಳೆಯ ಕೇಸನ್ನು ರೀ ಓಪನ್ ಮಾಡಿ ಹಿಂದೂ ಕಾರ್ಯಕರ್ತ ಬಂಧಿಸಿದ್ದಾರೆ. ಇದು ದ್ವೇಷದ ರಾಜಕಾರಣವಲ್ಲದೆ ಮತ್ತಿನ್ನೇನು ಇದನ್ನು ನಾವು ಖಂಡಿಸುತ್ತೇವೆ. ಜೊತೆಗೆ ನಾಳೆ ರಾಜ್ಯಾದ್ಯಂತ ಪ್ರತಿಭಟನೆ ನಡೆಯಲಿದ್ದು ಫ್ರೀಡಂ ಪಾರ್ಕ್ ನಲ್ಲಿ ನಾವು ಸರ್ಕಾರದ ವಿರುದ್ಧ ಹೋರಾಟ ಮಾಡ್ತೀವಿ ಎಂದ್ರು..