ಬೆಂಗಳೂರು: ರಾಮಜನ್ಮಭೂಮಿ ಹೋರಾಟದ ಕರಸೇವಕರ 31 ವರ್ಷದ ಹಿಂದಿನ ಕೇಸ್ ರೀ ಓಫನ್ ಮಾಡಿರೋ ವಿಚಾರ ಕಾಂಗ್ರೆಸ್- ಬಿಜೆಪಿ ಮಧ್ಯೆ ರಾಜಕೀಯ ವಾಕ್ಸಮರಕ್ಕೆ ವೇದಿಕೆಯಾಗಿದೆ. ಕೇಸರಿಪಡೆ ಕೈ ಸರ್ಕಾರವನ್ನ ಹಿಂದೂ ವಿರೋಧಿ ಕಾಂಗ್ರೆಸ್ ಅನ್ನೋ ಹಣೆಪಟ್ಟಿ ಕಟ್ಟಿ ಮುಸ್ಲಿಂ ತುಷ್ಠೀಕರಣ ಅಂತ ವ್ಯಂಗ್ಯವಾಡ್ತಿದೆ.
ಇತ್ತ ಗೃಹ ಸಚಿವ ಪರಮೇಶ್ವರ್ ಕೇಸ್ ರೀ ಓಫನ್ ಗೆ ಸ್ಪಷ್ಟನೆ ಕೊಟ್ಟಿದ್ದು ಬಿಜೆಪಿಗೆ ಟಾಂಗ್ ಕೊಡ್ತಿದ್ದಾರೆ. ಈ ಮಧ್ಯೆ ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ದೊಡ್ಡಮಟ್ಟದ ಹೋರಾಟಕ್ಕೆ ವಿಜ ಯೇಂದ್ರ ಕರೆ ಕೊಟ್ಟಿದ್ದು ನಾಳೆ ಫ್ರೀಡಂ ಪಾರ್ಕ್ ನಲ್ಲಿ ಸರ್ಕಾರದ ವಿರುದ್ಧ ಕೇಸರಿ ರಣಕಹಳೆ ಮೊಳಗಲಿದೆ. ರಾಮ ಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ ಬಿಜೆಪಿ, ಸಂಘಪರಿವಾರ ಸೇರಿದಂತೆ ಕೋಟ್ಯಾಂತರ ಹಿಂದೂಗಳು ಸೇರಿದಂತೆ ಇಡೀ ವಿಶ್ವವೇ ಈ ಅಮೃತ ಘಳಿಗೆಗೆ ಕಾತರರಾಗಿದ್ದಾರೆ.
Sri Ram Mandir: ಅಯೋಧ್ಯೆ ಶ್ರೀರಾಮನ ಅಭಿಷೇಕಕ್ಕೆ ನೇಪಾಳದಿಂದ ಬರಲಿದೆ 16 ಪವಿತ್ರ ನದಿಗಳ ನೀರು..!
ಈ ಮಧ್ಯೆ 31 ವರ್ಷಗಳ ಹಿಂದೆ ರಾಮಜನ್ಮಭೂಮಿ ಹೋರಾಟದಲ್ಲಿ ಭಾಗಿಯಾಗಿದ್ದ ಹುಬ್ಬಳ್ಳಿಯ ಕರ ಸೇವಕರ ಕೇಸ್ ಅನ್ನ ಸರ್ಕಾರ ಮತ್ತೆ ರೀ ಓಫನ್ ಮಾಡಿ ಕರಸೇವಕರನ್ನ ಬಂಧನ ಮಾಡಿರೋದು ಇದೀಗ ರಾಜಕೀಯ ಸ್ವರೂಪ ಪಡೆಯುತ್ತಿದೆ. ಕಾಂಗ್ರೆಸ್- ಬಿಜೆಪಿ ನಾಯಕರ ಮಧ್ಯೆ ವಾಕ್ಸಮರಕ್ಕೆ ಕಾರಣವಾಗಿದ್ದು ಹಿಂದು- ಮುಸ್ಲಿಂ ತುಷ್ಠೀಕರಣ ಅನ್ನೋ ಜಟಾಪಟಿ ಶುರುವಾಗಿದೆ..