ಬೆಂಗಳೂರು: ಅಯೋಧ್ಯೆ ರಾಮಮಂದಿರ ವಿಚಾರ ಬಿಜೆಪಿ – ಕಾಂಗ್ರೆಸ್ ಗೆ ರಾಜಕೀಯದ ಸರಕಾಗಿಬಿಟ್ಟಿದೆ.. ಹಾದಿ ಬೀದಿಲಿ ರಾಮನ ಹೆಸರನ್ನ ಎಳೆದು ತಂದು ಜಟಾಪಟಿಗೆ ಇಳಿದಿದ್ದಾರೆ.. ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯನವ್ರಿಗೆ ಆಹ್ವಾನ ಬಂದಿಲ್ಲ.. ಇದು ರಾಜ್ಯ ಕಾಂಗ್ರೆಸ್ ನಾಯಕರನ್ನ ಕೆರಳಿಸಿದ್ದು, ವಾಗ್ಯುದ್ಧಕ್ಕಿಳಿದಿದ್ದಾರೆ..
ಜನವರಿ 22 ರಂದು ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಭರ್ಜರಿ ಸಿದ್ದತೆ ನಡೀತಾ ಇದೆ.. ರಾಜ್ಯ ಬಿಜೆಪಿ ನಾಯಕರಂತೂ ರಾಮ ನಾಮ ಜಪ ಜೋರಾಗಿ ಮಾಡ್ತಿದ್ದಾರೆ.. ದೇಶದ ಪ್ರಮುಖ ಗಣ್ಯರಿಗೆ ಆಹ್ವಾನ ನೀಡಲಾಗಿದ್ದು, ರಾಜ್ಯದ ಸಿಎಂಗೆ ಆಹ್ವಾನ ಬಂದಿಲ್ಲ.. ಇದು ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ..
Sri Ram Mandir: ಅಯೋಧ್ಯೆ ಶ್ರೀರಾಮನ ಅಭಿಷೇಕಕ್ಕೆ ನೇಪಾಳದಿಂದ ಬರಲಿದೆ 16 ಪವಿತ್ರ ನದಿಗಳ ನೀರು..!
ರಾಜ್ಯದ ಸಿಎಂಗೆ ಆಹ್ವಾನ ನೀಡಿಲ್ಲ ಅಂದ್ರೆ ಅದು ದ್ವೇಷದ ರಾಜಕಾರಣ ಎಂದು ಕಾಂಗ್ರೆಸ್ ಸಚಿವರು ಹಿಗ್ಗಾಮುಗ್ಗ ವಾಗ್ದಾಳಿ ನಡೆಸ್ತಿದ್ದಾರೆ.. ರಾಮ ಯಾರೊಬ್ಬರ ಜಹಗೀರ್ ಅಲ್ಲ.. ಖಾಸಗಿ ಆಸ್ತಿನೂ ಅಲ್ಲ ಅಂತಾ ಅರಣ್ಯ ಸಚಿವ ಈಶ್ವರ್ ಖಂಡ್ರೆ ವಾಗ್ದಾಳಿ ನಡೆಸಿದ್ದಾರೆ.. ಭಾರತ್ ಮಾತಾಕಿ ಜೈ ಎಂದು ಅತ್ಯಾಚಾರ ಕೊಲೆ ಮಾಡಿದ್ರೆ, ಅದನ್ನ ಒಪ್ಪಿಕೊಳ್ಳೋದಕ್ಕೆ ಆಗುತ್ತಾ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ..