ಬೆಂಗಳೂರು: ”ಯಾರೋ ನನಗೆ ಮಾಟ ಮಾಡಿಸಿರಬಹುದು. ನಾನೇ ಹೋಗಿ ನಾಲ್ಕೂವರೆ ಅಡಿ ಗುಂಡಿಗೆ ಬಿದ್ದೆ. ನನಗಾಗಿರುವ ಅನ್ಯಾಯದ ಬಗ್ಗೆ ಹೈಕಮಾಂಡ್ ಗಮನಕ್ಕೆ ತರುತ್ತೇನೆ. ಪಕ್ಷದ ರಾಷ್ಟ್ರೀಯ ನಾಯಕರ ನಿಲುವೇ ನನ್ನ ನಿಲುವು…” ಹೀಗೆಂದವರು ಮಾಜಿ ಸಚಿವ ವಿ. ಸೋಮಣ್ಣ. ವಿಧಾನಸಭೆ ಚುನಾವಣೆ ಬಳಿಕ ಒಂದಲ್ಲಒಂದು ಸಂದರ್ಭದಲ್ಲಿಅಸಮಾಧಾನ ಹೊರಹಾಕುತ್ತಲೇ ಇರುವ ಸೋಮಣ್ಣ,
Sri Ram Mandir: ಅಯೋಧ್ಯೆ ಶ್ರೀರಾಮನ ಅಭಿಷೇಕಕ್ಕೆ ನೇಪಾಳದಿಂದ ಬರಲಿದೆ 16 ಪವಿತ್ರ ನದಿಗಳ ನೀರು..!
ಕಾಂಗ್ರೆಸ್ ಪಡಸಾಲೆ ಸೇರಬಹುದು ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ, ಗೋವಿಂದರಾಜನಗರದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ತುಸು ಭಾವನಾತ್ಮಕವಾಗಿಯೇ ಮಾತನಾಡಿದ ಅವರು, ಬಿಜೆಪಿ ವರಿಷ್ಠರನ್ನು ಭೇಟಿಯಾಗಿ ಎಲ್ಲವನ್ನೂ ಇತ್ಯರ್ಥಪಡಿಸಿಕೊಳ್ಳುವ ಸುಳಿವು ನೀಡಿದರು.
”ನರೇಂದ್ರ ಮೋದಿ ಅವರು ನೆಚ್ಚಿನ ಪ್ರಧಾನಿ. ರಾಷ್ಟ್ರೀಯ ನಾಯಕರು ಹೇಳಿದಂತೆ ನಡೆದುಕೊಳ್ಳುತ್ತೇನೆ. ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು,” ಎಂದೂ ಹೇಳಿದರು. ಈ ಮೂಲಕ ಬಿಜೆಪಿ ಬಿಡುವುದಿಲ್ಲ, ಕಾಂಗ್ರೆಸ್ ಸೇರುವ ಸಾಧ್ಯತೆಗಳಿಲ್ಲಎಂಬ ಸಂದೇಶವನ್ನು ರವಾನಿಸಿದ್ದಾರೆ.