ಹುಬ್ಬಳ್ಳಿ: “ಭಾರತೀಯ ಜನತಾ ಪಕ್ಷದರಿಗೆ ಯಾವುದೇ ಜವಾಬ್ದಾರಿ ಇಲ್ಲ. ಕೇವಲ ಕೋಮುಭಾವನೆ ಕೆರಳಿಸುವ ಮೂಲಕ ಬೆಂಕಿ ಹಚ್ಚುವ ಕೆಲಸ ಮಾಡುತ್ತಾ ಇದ್ದಾರೆ’’ ಎಂದು ಹುಬ್ಬಳ್ಳಿ- ಧಾರವಾಡ ಪೂರ್ವ ವಿಧಾನ ಸಭಾ ಕ್ಷೇತ್ರದ ಶಾಸಕ ಅಬ್ಬಯ್ಯಾ ಪ್ರಸಾದ್ ಆರೋಪಿಸಿದರು. ನಗರದಲ್ಲಿ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, “ರಾಮಜನ್ಮಭೂಮಿ ವಿವಾದದಡಿ 31 ವರ್ಷಗಳ ಹಿಂದಿನ ಪ್ರಕರಣವನ್ನು ರೀ-ಓಪನ್ ಮಾಡಿ ಕೆಲವರನ್ನು ಬಂಧನ ಮಾಡಿದ್ದರ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ.
ಅದು ಬಾಕಿ ಪ್ರಕರಣದಲ್ಲಿ ಅವರ ಬಂಧನ ಆಗಿದೆ. ಆದರೆ ಅದಕ್ಕೂ ರಾಜಕೀಯ ಬಣ್ಣ ಹಚ್ಚುವ ಕೆಲಸ ಬೇಡ’’ ಎಂದು ಅವರು ತಿಳಿಸಿದರಲ್ಲದೆ, “ಪೊಲೀಸರು ಅವರವರ ಕೆಲಸ ಮಾಡುತ್ತಾ ಇದ್ದಾರೆ. ಅದೊಂದು ರೊಟೀನ್ ಕೆಲಸ ಅಷ್ಟೇ. ಆದರೆ, ಇದನ್ನೇ ದೊಡ್ಡ ರಾದ್ಧಾಂತ ಮಾಡುವುದು ಸರಿಯಲ್ಲ’’ ಎಂದು ಅವರು ಅಭಿಪ್ರಾಯಪಟ್ಟರು.
Post Office Recruitment: ಅಂಚೆ ಇಲಾಖೆಯಲ್ಲಿ ಸುವರ್ಣಾವಕಾಶ..! ಇಂದೇ ಅರ್ಜಿ ಸಲ್ಲಿಸಿ: ವೇತನ 20 ಸಾವಿರ!
“ಲೋಕಸಭಾ ಚುನಾವಣೆ ಹತ್ತಿರದಲ್ಲೇ ಇದೆ. ಇದೇ ವಿಷಯವನ್ನು ರಾಜಕೀಯ ವಿಷಯವಾಗಿ ಬಳಸಿಕೊಳ್ಳಲು ಹುನ್ನಾರ ಸಾಗಿದೆ. ಜನರಿಗೆ ಗೊತ್ತಿದೆ ಯಾವುದು ಸರಿ, ಯಾವುದು ಸರಿ ಇಲ್ಲ ಅಂತ. ವಿಧಾನಸಭಾ ವಿರೋಧ ಪಕ್ಷದ ನಾಯಕ ಆರ್ ಅಶೋಕಗೆ ಅಭಿವೃದ್ಧಿ ಕಾಮಗಾರಿಗಳ ಕುರಿತು ಮಾತನಾಡಬೇಕು. ಅದನ್ನ ಬಿಟ್ಟು ಇಂತಹ ಅನವಶ್ಯಕ ವಿಷಯಗಳ ಕುರಿತು ಪ್ರತಿಭಟನೆ ಮಾಡಬಾರದು’’ ಎಂದು ಅವರು ಆಗ್ರಹಿಸಿದರು.