ತಮಿಳು ನಟ ವಿಶಾಲ್ ಯಾರಿಗೆ ಗೊತ್ತಿಲ್ಲ ಹೇಳಿ.. ಸದಾ ಒಂದಲ್ಲ ಒಂದು ಸುದ್ದಿಯಲ್ಲಿ ಇರುತ್ತಾರೆ. ಕನ್ನಡ ಸಿನಿರಸಿಕರಿಗೂ ಚಿರಪರಿತರು. ಈಗ ಸದ್ಯ ವಿಶಾಲ್ ಬಗ್ಗೆ ಒಂದು ಸುದ್ದಿ ಹರಿದಾಡುತ್ತಿದೆ. ಹೌದು ವಿಶಾಲ್ ನ್ಯೂಯಾರ್ಕ್ʼನಲ್ಲಿನ ಮಾಲ್ವೊಂದರ ಒಳಗಿಂದ ಹುಡುಗಿಯ ಜೊತೆ ಹೊರಗೆ ಬರುವುದು. ನೀವು ವಿಶಾಲ್ ಅಲ್ವಾ? ಎನ್ನುತ್ತಿದ್ದಂತೆ ಮುಖ ಮುಚ್ಚಿಕೊಂಡು ಓಡಿ ಹೋಗುವಂತಹ ವಿಡಿಯೋ ವೈರಲ್ ಆಗುತ್ತಿದೆ.
ವಿಶಾಲ್ ಜೊತೆ ಕಾಣಿಸಿಕೊಂಡ ಆ ಯುವತಿ ಯಾರು? ಏನ್ ಕಥೆ? ಎಂದು ಕೆಲವರು ಕೇಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋದಲ್ಲಿರೋದು ವಿಶಾಲ್ ಹೌದೋ ಅಲ್ವೋ ಎಂದು ಚರ್ಚಿಸುವವರು ಇದ್ದಾರೆ. ಕೆಲವರು ಇದು ಫೇಕ್ ವಿಡಿಯೋ ಎನ್ನುತ್ತಿದ್ದಾರೆ. ಸಿನಿಮಾ ಪಬ್ಲಿಸಿಟಿಗಾಗಿ ಈ ರೀತಿಯ ವಿಡಿಯೋ ವೈರಲ್ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ.
Is that Actor @VishalKOfficial walking with someone in NYC 🤔 pic.twitter.com/ddMESEuKOq
— Ramesh Bala (@rameshlaus) December 26, 2023
ಇದು ಸಿನಿಮಾ ಚಿತ್ರೀಕರಣದ ವಿಡಿಯೋ? ಎಂದು ಕೆಲವರು ಅನುಮಾನಿಸುತ್ತಿದ್ದಾರೆ. ಸರಿಯಾಗಿ ಗಮನಿಸಿದರೆ ಇದು ಫೇಕ್, ಪಬ್ಲಿಸಿಟಿ ಗಿಮಿಕ್ ಎನ್ನುವುದು ಅರ್ಥವಾಗುತ್ತದೆ ಎಂದು ಕೆಲವರು ವಾದಿಸುತ್ತಿದ್ದಾರೆ. ಆದರೆ ಈ ಬಗ್ಗೆ ಸ್ವತಃ ವಿಶಾಲ್ ಮಾತನಾಡಬೇಕಿದೆ. ಇತ್ತೀಚೆಗೆ ಮುಂಬೈ CBFC ಬಗ್ಗೆ ವಿಶಾಲ್ ಗಂಭೀರ ಆರೋಪ ಮಾಡಿ ಸುದ್ದಿಯಾಗಿದ್ದರು. ತಮ್ಮ ‘ಮಾರ್ಕ್ ಆಂಟನಿ’ ಚಿತ್ರದ ಹಿಂದಿ ವರ್ಷನ್ ಸೆನ್ಸಾರ್ ಕಾಪಿ ಪಡೆಯಲು ಅಲ್ಲಿನ ಸೆನ್ಸಾರ್ ಮಂಡಳಿಗೆ ಲಂಚ ನೀಡಿದ್ದಾಗಿ ವಿಶಾಲ್ ಹೇಳಿದ್ದರು. ಇದು ಭಾರೀ ಕೋಲಾಹಲಕ್ಕೆ ಕಾರಣವಾಗಿತ್ತು.