ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಇರೋದು ಹಿಂದೂ ವಿರೋಧಿ ಸರ್ಕಾರ ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಸರ್ಕಾರ ಅಂತ ಪದೇ ಪದೇ ನೆನಪು ಮಾಡಿಕೊಡುವ ಕೆಲಸ ಮಾಡ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಿನ್ನೆ ಹುಬ್ಬಳ್ಳಿಯಲ್ಲಿ 30 ವರ್ಷದ ಹಳೇ ಕೇಸನ್ನ ರೀ ಓಪನ್ ಮಾಡಿ ಶ್ರೀಕಾಂತ್ ಪೂಜಾರಿ ಅವರನ್ನ ಅರೆಸ್ಟ್ ಮಾಡಿರೋಧನ್ನ ಬಿಜೆಪಿ ವಿರೋಧಿಸುತ್ತೆ. ಇಡೀ ದೇಶದಲ್ಲಿ ಕೋಟ್ಯಾಂತರ ಹಿಂದೂ ಕಾರ್ಯಕರ್ತರು ಜನವರಿ 22 ರಂದು ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಟಾಪನೆ ಸಂಧರ್ಭದಲ್ಲಿ ಆಯ್ಕೆ ಮಾಡಿಕೊಂಡಿದೆ ಎಂದು ಹೇಳಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಇಡೀ ದೇಶಕ್ಕೇ ತೋರಿಸಿದ್ದಾರೆ ಬಿಜೆಪಿ ಇದನ್ನ ಬಲವಾಗಿ ಖಂಡಿಸುತ್ತೆ ಅರುಣ್ ಯೋಗರಾಜ್ ರಾಮನ ಶಿಲೆ ಕೆತ್ತಿದ್ದಾರೆ ಅಂತ ಸಂತೋಷ ಪಟ್ಟಿದ್ದೆವು ಇಂತಹ ಸಂದರ್ಭಗಳಲ್ಲಿ ಸರ್ಕಾರ ಬಂಧನ ಮಾಡುವ ಕೆಲಸ ಮಾಡಿದೆ ಎಂದರು.
ನಾಳೆ ರಾಜ್ಯಾದ್ಯಂತ ಹೋರಾಟಕ್ಕೆ ಕರೆ ನೀಡ್ತಿದ್ದೇನೆ ಬೆಂಗಳೂರಿನ ಪ್ರೀಡಂಪಾರ್ಕ್ ನಲ್ಲಿ ಪ್ರತಿಭಟನೆ ಮಾಡ್ತಿದ್ದೇವೆ ಸರ್ಕಾರ, ಸಿಎಂ ಸಿದ್ದರಾಮಯ್ಯ ವಿರುದ್ಧ ಹೋರಾಟಕ್ಕೆ ಕರೆ ಕೊಟ್ಟ ವಿಜಯೇಂದ್ರ.
ನಾಳೆ ದಿನ ಬಿಜೆಪಿ ರಾಜ್ಯಾದ್ಯಂತ ಹೋರಾಟ ಮಾಡ್ತಿವಿ ಈಗಾಗಲೇ ಮಂತ್ರಾಕ್ಷತೆ ವಿತರಣೆ ಕಾರ್ಯಕ್ರಮ ಮಾಡ್ತಿದ್ದೇವೆ. ಅಯೋಧ್ಯೆಯಿಂದ ತಂದ ಪವಿತ್ರ ಮಂತ್ರಾಕ್ಷತೆಯನ್ನ ಮನೆ ಮನೆಗೆ ತಲುಪಿಸಲಾಗ್ತಿದೆ ಇದಕ್ಕೂ ಕಾಂಗ್ರೆಸ್ ಪುಡಾರಿಗಳು ಅಡ್ಡಿ ಪಡಿಸೋ ಕೆಲಸ ಮಾಡಲಾಗ್ತಿದೆ. ಎಂದು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು.