ಸ್ಯಾಂಡಲ್ವುಡ್ ಹೀರೋ ಅಭಿಷೇಕ್ ಅಂಬರೀಶ್ (Abhishek Ambareesh) ಪತ್ನಿ ಅವಿವಾ (Aviva) ಸ್ಪೆಷಲ್ ಫೋಟೋವೊಂದನ್ನ ಶೇರ್ ಮಾಡಿ ಹೊಸ ವರ್ಷದ ಆರಂಭಕ್ಕೆ ಶುಭಕೋರಿದ್ದಾರೆ. ಪತಿ ಜೊತೆಗಿನ ರೊಮ್ಯಾಂಟಿಕ್ ಫೋಟೋ ಹಂಚಿಕೊಂಡು ಅವಿವಾ ವಿಶೇಷವಾಗಿ ಶುಭಹಾರೈಸಿದ್ದಾರೆ.
ಪತಿ ಅಭಿಷೇಕ್ ತೊಡೆ ಮೇಲೆ ಕುಳಿತು ಮುದ್ದಾಗಿ ನಗು ಬೀರುತ್ತಿರೋ ಫೋಟೋವನ್ನ ಅವಿವಾ (Aviva) ಶೇರ್ ಮಾಡಿ ಸ್ವೀಟ್ ಆಗಿ ನ್ಯೂ ಇಯರ್ಗೆ ವಿಶ್ಸ್ ತಿಳಿಸಿದ್ದಾರೆ
ಕಳೆದ ವರ್ಷ ಜೂನ್ 5ಕ್ಕೆ ಅಭಿಷೇಕ್- ಅವಿವಾ ಜೋಡಿ ಗುರುಹಿರಿಯರ ಸಮ್ಮುಖದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದು, ಹಲವು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತುವ ಮೂಲಕ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದರು.
ಇತ್ತೀಚೆಗೆ ‘ಬ್ಯಾಡ್ ಮ್ಯಾನರ್ಸ್’ (Bad Manners) ಸಿನಿಮಾ ರಿಲೀಸ್ ಆಗಿದ್ದು, ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಪಡದಿತ್ತು. ಅವಿವಾ ಕೂಡ ಮಾಡೆಲ್, ಫ್ಯಾಷನ್ ಡಿಸೈನರ್ ಆಗಿ ಗುರುತಿಸಿಕೊಂಡಿದ್ದಾರೆ. ಮದುವೆಯ ಬಳಿಕವೂ ತಮ್ಮ ಕ್ಷೇತ್ರದಲ್ಲಿ ಅವಿವಾ ಆ್ಯಕ್ಟೀವ್ ಆಗಿದ್ದಾರೆ.