ಪಾರ್ಟಿ ಪ್ರಿಯರಿಗೆ ಕಿಕ್ ಏರಿಸುವ ಮ್ಯಾಟ್ನಿ ಸಿಂಗಿಂಗ್ ಮಸ್ತಿ ಸೆನ್ಸೇಷನ್ ಕ್ರಿಯೇಟ್ ಮಾಡ್ತಿದೆ. ಬಾರೋ ಬಾರೋ ಬಾಟಲ್ ತರೋ ಎಂಬ ಪಾರ್ಟಿ ನಂಬರ್ ಗೆ ನೀನಾಸಂ ಸತೀಶ್ ಭರ್ಜರಿ ಸ್ಟೆಪ್ ಹಾಕಿದ್ದಾರೆ. ಸಂಜೆ ಮೇಲೆ ಸುಮ್ಮನೇ ಹಾಗೇ ಫೋನ್ ಮಾಡ್ಲಾ ನಿಂಗೆ ಅಂತಾ ರಚ್ಚು ಜೊತೆ ಕುಣಿದ್ದ ಮಂಡ್ಯ ಹೈದ ಈಗ ಪಾರ್ಟಿ ಮೂಡ್ ಗೆ ಜಾರಿದ್ದಾರೆ.
ಮ್ಯಾಟ್ನಿ ಸಿನಿಮಾದ ಮತ್ತೊಂದು ಸಿಂಗಿಂಗ್ ನ್ಯೂಯರ್ ರಂಗು ಹೆಚ್ಚಿಸಿದೆ. ನಟರಾಕ್ಷಸ ಡಾಲಿ ಧನಂಜಯ್ ಅನಾವರಣ ಮಾಡಿರುವ ಬಾರೋ ಬಾರೋ ಬಾಟಲ್ ತರೋ ಹಾಡು ಸಂಗೀತ ಪ್ರಿಯರ ಕಿವಿ ಇಂಪು ಮಾಡಿದೆ. ಸತೀಶ್ ಜೊತೆ ನಾಗಭೂಷಣ್, ಶಿವರಾಜ್ ಕೆಆರ್ ಪೇಟೆ, ಪೂರ್ಣ ಕುಣಿದು ಕುಪ್ಪಳಿಸಿದ್ದಾರೆ. ಪಾರ್ಟಿ ಪ್ರಿಯರಿಗೆ ಹೇಳಿ ಮಾಡಿಸಿದಂತಿರುವ ಹಾಡಿಗೆ ಪೂರ್ಣಚಂದ್ರ ತೇಜಸ್ವಿ ಪದಪುಂಜ ಪೊಣಿಸಿ ಸಂಗೀತ ಒದಗಿಸುವುದರ ಜೊತೆಗೆ ಸತೀಶ್, ರಾಣಾ ಜೊತೆಗೂಡಿ ಕಂಠ ಕುಣಿಸಿದ್ದಾರೆ.
ಮ್ಯಾಟ್ನಿ ಸಿನಿಮಾಗೆ ಮನೋಹರ್ ಕಾಂಪಳ್ಳಿ ಆಕ್ಷನ್ ಕಟ್ ಹೇಳಿದ್ದು, ನೀನಾಸಂ ಸತೀಶ್, ರಚಿತಾ ರಾಮ್ ಹಾಗೂ ಅದಿತಿ ಪ್ರಭುದೇವ ನಟಿಸಿದ್ದಾರೆ. F3 ಪ್ರೊಡಕ್ಷನ್ಸ್ ಲಾಂಛನದಲ್ಲಿ ಪಾರ್ವತಿ ಎಸ್ ಗೌಡ ಈ ಸಿನಿಮಾದ ನಿರ್ಮಾಣ ಮಾಡಿದ್ದಾರೆ.