ನನ್ನ ಸೆಲೆಬ್ರೆಟೀಸ್ ಪ್ರೀತಿ ಆಸ್ಕರ್ಗಿಂತ ಜಾಸ್ತಿ ಎಂದು ಅಭಿಮಾನಿಗಳ ಪ್ರೀತಿಯನ್ನು ನಟ ದರ್ಶನ್ ಹಾಡಿ ಹೊಗಳಿದರು. ಕಾಟೇರ ಸಕ್ಸಸ್ ಸಂಭ್ರಮದಲ್ಲಿ ಮಾತನಾಡಿದ ಅವರು, ನನ್ನ ಸೆಲೆಬ್ರೆಟೀಸ್ ಹಾಗೂ ಕರ್ನಾಟಕದ ಜನತೆ ಕಾಟೇರ ಚಿತ್ರವನ್ನು ಹೆಗಲ ಮೇಲೆ ಹೊತ್ತುಕೊಂಡು ಮೆರೆಸುತ್ತಿದ್ದಾರೆ. ಅವರ ಈ ಪ್ರೀತಿ ನನಗೆ ಆಸ್ಕರ್ ಪ್ರಶಸ್ತಿಗಿಂತ ಜಾಸ್ತಿ ಎಂದು ಹೊಗಳಿದರು.
ನಾನು ಒಬ್ಬ ಕಲಾವಿದ ಸರ್.. ನನಗೆ ಅವಾರ್ಡ್ ಗಿವಾರ್ಡ್ ಗೊತ್ತಿಲ್ಲ. ನ್ಯಾಷಿನಲ್ ಅವಾರ್ಡ್ ಪಡೆಯಬೇಕು ಅಂತ ಸಿನಿಮಾ ಮಾಡುತ್ತಿಲ್ಲ. ನಿರ್ದೇಶಕರು ಒಂದು ಪಾತ್ರದ ಬಗ್ಗೆ ಕನಸು ಕಂಡಿರುತ್ತಾನೆ. ಅವರ ನಿರೀಕ್ಷೆ ಹಾಗೂ ಬೇಡಿಕೆಗೆ ತಕ್ಕಂತೆ ನಾನು ನಟಿಸುತ್ತೇನೆ ಎನ್ನುವ ಮೂಲಕ ಪ್ರಶಸ್ತಿಗೋಸ್ಕರ ನಾನು ಸಿನಿಮಾ ಮಾಡಲ್ಲ ಎಂದು ಪುನರುಚ್ಚರಿಸಿದರು.
ಕಥೆ ಕೇಳುವಾಗ ಅಭಿನಯಕ್ಕೆ ತುಂಬಾ ಜಾಗ ಇದೆ ಅನಿಸ್ತು. ಖುಷಿ ಆಗುತ್ತದೆ. ನಾನು ಸಿನಿಮಾ ಮಾಡುವಾಗ ಮೂರು ರೀತಿ ಯೋಚನೆ ಮಾಡುತ್ತೇನೆ. ಹೆಣ್ಣನ್ನು ಕೆಟ್ಟದಾಗಿ ತೋರಿಸಬಾರದು. ಕನ್ನಡ ಭಾಷೆಗೆ ಅವಮಾನವಾಗುವಂತೆ ಇರಬಾರದು. ಅನ್ನದಾತರಿಗೆ ನಷ್ಟ ಆಗಬಾರದು ಎಂದು ಕಾಟೇರ ಸಿನಿಮಾ ಜರ್ನಿ ಬಗ್ಗೆ ಮನಬಿಚ್ಚಿ ಮಾತನಾಡಿದರು.
ಕಾಟೇರ ಟೈಟಲ್ ಬಂದಿದ್ದು ಹೇಗೆ?
ಕಾಟೇರ ಟೈಟಲ್ ವಿಷಯ ಪ್ರಸ್ತಾಪಿಸಿದ ದರ್ಶನ್ ಅವರು, ಈ ಟೈಟಲ್ ಎಂ.ಜಿ. ರಾಮಮೂರ್ತಿ ಸರ್ ಅವರ ಬ್ಯಾನರ್ನಲ್ಲಿ ಇತ್ತು. ಆಮೇಲೆ ನಮ್ಮ ತಾತ (ರಾಕ್ಲೈನ್ ವೆಂಕಟೇಶ್) ಹೋಗಿ ಇದು ನಮ್ಮ ಚಿತ್ರಕ್ಕೆ ಚೆನ್ನಾಗಿ ಇರುತ್ತೆ ಅಂತ ಕೇಳಿಕೊಂಡರು. ಬಳಿಕ, ನಾವು ಹೋಗಿ ಈ ಚಿತ್ರಕ್ಕೆ ಟೈಟಲ್ ಚೆನ್ನಾಗಿರುತ್ತೆ ಕೊಡಿ ಅಂದ್ವಿ. ಅವರ ದೊಡ್ಡ ಗುಣ, ನಮಗೆ ಟೈಟಲ್ ಕೊಟ್ಟರು ಎಂದು ಹೇಳಿದರು.