ಕೊಪ್ಪಳ:- ನಾವು ದ್ವೇಷದ ರಾಜಕಾರಣ ಮಾಡಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು ನಾವು ದ್ವೇಷದ ರಾಜಕಾರಣ ಮಾಡುವುದಿಲ್ಲ. ನ್ಯಾಯಾಲಯದ ನಿರ್ದೇಶನದ ಅನ್ವಯ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ನಮ್ಮ ಸರ್ಕಾರ ನಿರಪರಾಧಿಗಳನ್ನು ಬಂಧಿಸುವ ಕೆಲಸ ಯಾವತ್ತೂ ಮಾಡುವುದಿಲ್ಲ ಎಂದು ಹೇಳಿದರು.
ರಾಮಮಂದಿರ ಉದ್ಘಾಟನೆ ದಿನ ಸರ್ಕಾರಿ ರಜೆಗೆ ಬಿಜೆಪಿ ಆಗ್ರಹ ಮಾಡುತ್ತಿದೆಯಲ್ಲ ಎನ್ನುವ ಪ್ರಶ್ನೆಗೆ ರಜೆ ಬಗ್ಗೆ ನನಗೆ ಗೊತ್ತಿಲ್ಲ. ಕೇಂದ್ರ ಸರ್ಕಾರ ಕಾರ್ಯಕ್ರಮ ಮಾಡ್ತಿರೋದು ಕೇಂದ್ರವೇ ರಜೆ ನೀಡಲಿ ಎಂದು ಹೇಳಿದರು.
ರಾಮ ಭಕ್ತರಿಗೆ ಮಾತ್ರ ರಾಮ ಮಂದಿರ ಉದ್ಘಾಟನೆಗೆ ಆಹ್ವಾನ ಎನ್ನುವ ಕೆಲ ಅರ್ಚಕರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ ಯಾರಿಗೆ ಆಹ್ವಾನ ಕೊಟ್ಟಿದ್ದಾರೊ, ಯಾರಿಗೆ ಬಿಟ್ಟಿದ್ದಾರೊ ನನಗೆ ಗೊತ್ತಿಲ್ಲ. ಅಯೋಧ್ಯೆಗೆ ಯಾರು ಹೋಗುತ್ತಾರೊ ಹೋಗಲಿ, ಯಾರು ಬಿಡುತ್ತಾರೊ ಬಿಡಲಿ ಎಂದರು.