ದರ್ಶನ್ ನಟನೆಯ ‘ಕಾಟೇರ’ (Katera) ಸಿನಿಮಾ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಹೊಸ ವರ್ಷದ ಶುಭಾರಂಭದ ದಿನವೇ ಕಾಟೇರ ಚಿತ್ರದ ಸಕ್ಸಸ್ ಹಬ್ಬವನ್ನು ಚಿತ್ರತಂಡ ಸಂಭ್ರಮಿಸಿದ್ದಾರೆ. ದರ್ಶನ್ ನಟನೆಯನ್ನು ಡಾ.ರಾಜ್ಕುಮಾರ್ (Rajkumar) ಅವರಿಗೆ ಹೋಲಿಸಿದವರಿಗೆ ಅವರ ಕಾಲು ಧೂಳಿಗೂ ನಾವು ಸಮ ಅಲ್ಲ ಎಂದು ದರ್ಶನ್ (Darshan)ಮಾತನಾಡಿದ್ದಾರೆ.
ಕಾಟೇರ ಸಕ್ಸಸ್ ಸಂಭ್ರಮದಲ್ಲಿ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ದರ್ಶನ್ ಉತ್ತರ ಹೀಗಿತ್ತು. ಕಾಟೇರ ಚಿತ್ರದಲ್ಲಿ ಭಕ್ತ ಪ್ರಹ್ಲಾದ ಚಿತ್ರದ ಹಿರಣ್ಯ ಕಶ್ಯಪು ಡೈಲಾಗ್ ಬರುತ್ತೆ. ಆ ಡೈಲಾಗ್ ಬಳಿಕ ‘ನಿಮ್ಮ ಅಪ್ಪನ ಹೆಸರು ಉಳಿಸಿಬಿಟ್ಟೆ ಕಣಯ್ಯಾ’ ಅಂತ ಕುಮಾರ್ ಗೋವಿಂದ್ ಹೇಳುತ್ತಾರೆ.
ನಿಮ್ಮ ಅಭಿನಯ ನೋಡಿದ ಮೇಲೆ ನಿಮ್ಮ ಸೆಲೆಬ್ರೆಟೀಸ್ ಡಾ. ರಾಜ್ ಬಿಟ್ಟರೆ ಈ ರೀತಿ ಪೌರಾಣಿಕ ಪಾತ್ರ ಡಿ ಬಾಸ್ ಮಾತ್ರ ಮಾಡಲು ಸಾಧ್ಯ ಎನ್ನುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆ ಏನು? ಎಂದು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ದರ್ಶನ್ ಅವರು, ಡಾ.ರಾಜ್ಕುಮಾರ್ ಸರ್ ಅವರ ಹೆಸರು ಹೇಳೋಕೆ ಅಲ್ಲ.. ಅವರ ಕಾಲು ಧೂಳಿಗೂ ನಾನು ಸಮ ಅಲ್ಲ. ಆದರೆ, ಪ್ರಯತ್ನ ಮಾಡಬಹುದು. ಅವರು ಮಾಡಿರುವ ಪಾತ್ರದಲ್ಲಿ 5 ಪರ್ಸೆಂಟ್ ಅಲ್ಲ, 0.1 ಪರ್ಸೆಂಟ್ ಕೂಡ ನಮಗೆ ಮಾಡಲು ಆಗಲ್ಲ. ರಾಜಕುಮಾರ ಸರ್ ಜೊತೆ ನಮ್ಮನ್ನ ಕಂಪೇರ್ ಮಾಡಬೇಡಿ ಎಂದು ಮನವಿ ಮಾಡಿದರು.
ಡಾ.ರಾಜ್ಕುಮಾರ್ ಅವರ ಹೆಸರಲ್ಲ. ಅವರ ಕಾಲು ಧೂಳಿಗೂ ನಾವು ಸಮ ಅಲ್ಲ. ದಯವಿಟ್ಟು ಈ ವಿಚಾರವನ್ನು ಅಲ್ಲಿ ತನಕ ಎತ್ತುಕೊಂಡು ಹೋಗಲೇಬೇಡಿ. ನಾವು ಪ್ರಯತ್ನ ಮಾಡಬಹುದು. ಆದರೆ 1% ನಾವು ಅವರ ನಟನೆಗೆ ರೀಚ್ ಆಗೋಕೆ ಸಾಧ್ಯನೇ ಇಲ್ಲ ಎಂದು ಅಣ್ಣಾವ್ರ ಬಗ್ಗೆ ಹೆಮ್ಮೆಯಿಂದ ದರ್ಶನ್ ಮಾತನಾಡಿದ್ದಾರೆ.