ಕಾಮಿಡಿ ಕಿಂಗ್ ಚಿಕ್ಕಣ್ಣ ಹೀರೋ ಆಗಿ ಬಣ್ಣ ಹಚ್ಚಿರುವ ಮೊದಲ ಸಿನಿಮಾ ಉಪಾಧ್ಯಕ್ಷ. ಉಮಾಪತಿ ನಿರ್ಮಾಣದ ಈ ಚಿತ್ರಕ್ಕೆ ಅನಿಲ್ ಕುಮಾರ್ ಸಾರಥಿ. ಅಧ್ಯಕ್ಷನಾಗಿ ಶರಣ್ ಹವಾಳಿ ಇಟ್ಟಾಗಿದೆ. ಈಗ ಉಪಾಧ್ಯಕ್ಷನ ಚಿಕ್ಕಣ್ಣ ಹಂಗಾಮ ಶುರು ಮಾಡುವ ಶುಭ ಘಳಿಗೆ ಹತ್ತಿರ ಬಂದಿದೆ. ಜನವರಿ 26, ದೇಶಾದ್ಯಂತ ಗಣರಾಜ್ಯೋತ್ಸವ..ಈ ಸಂಭ್ರಮದ ಉಪಾಧ್ಯಕ್ಷ ಬೆಳ್ಳಿತೆರೆಯಲ್ಲಿ ದರ್ಬಾರ್ ಶುರು ಮಾಡ್ತಿದ್ದಾರೆ. ಇನ್ನೇನೂ ಚಿತ್ರ ಬಿಡುಗಡೆಗೆ ದಿನಗಣನೆ ಶುರುವಾಗಿದ್ದು, ಉಪಾಧ್ಯಕ್ಷ ಬಳಗ ಪ್ರಚಾರ ಪಡಸಾಲೆಗಿಳಿದಿದೆ.
ಉಪಾಧ್ಯಕ್ಷ ಸಿನಿಮಾದ ನಯಾ ಟೀಸರ್ ಹೊರಬಿದ್ದಿದೆ. ಬಾ ಬಾ ನಾನ್ ರೆಡಿ ಅನ್ನುತ್ತಾ ಚಿಕ್ಕಣ್ಣ ರಾಜ್ಯಾದ್ಯಂತ ಮೆರವಣಿಗೆ ಹೊರಡಲು ಸಿದ್ಧರಾಗಿದ್ದಾರೆ. ಉಪಾಧ್ಯಕ್ಷರಿಗೆ ಅಧ್ಯಕ್ಷರು ಸಾಥ್ ಕೊಟ್ಟಿದ್ದು, ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಚಿಕ್ಕಣ್ಣನಿಗೆ ಜೋಡಿಯಾಗಿ ಕಿರುತೆರೆ ಸುಂದ್ರಿ ಮಲೈಕಾ ನಟಿಸಿದ್ದು, ಈ ಚಿತ್ರದ ಮೂಲಕ ನಾಯಕಿಯಾಗಿ ಬಡ್ತಿ ಪಡೆದಿದ್ದಾರೆ. ಅಧ್ಯಕ್ಷ ಚಿತ್ರದಲ್ಲಿದ್ದ ಕರಿಸುಬ್ಬು, ರವಿಶಂಕರ್, ಕೀರ್ತಿರಾಜ್ ಇಲ್ಲಿಯೂ ಕಂಟಿನ್ಯೂ ಆಗಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಉಪಾಧ್ಯಕ್ಷನ ಲವ್ ನಂಬರ್ ಧಮಾಕ ಎಬ್ಬಿಸಿದ್ದು, ಈಗ ಟೀಸರ್ ಸರದಿ.
ಉಮಾಪತಿ ಫಿಲ್ಮಂಸ್ ಬ್ಯಾನರ್ ನಡಿ ಸ್ಮಿತಾ ಉಮಾಪತಿ ಚಿತ್ರ ನಿರ್ಮಿಸಿದ್ದಾರೆ. 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ನಟಿಸಿರುವ ಚಿಕ್ಕಣ್ಣ ಅವರಿಗೆ ಹೀರೋ ಆಗಿ ಇದು ದೊಡ್ಡ ಚಾಲೆಂಜ್..ಸ್ಯಾಂಪಲ್ಸ್ ಮೂಲಕ ಸ್ಯಾಂಡಲ್ ವುಡ್ ಸಿನಿ ಸರ್ಕಲ್ ನಲ್ಲಿ ಗದ್ದಲ ಎಬ್ಬಿಸಿರುವ ಉಪಾಧ್ಯಕ್ಷನ ದರ್ಬಾರ್ ನೋಡೋದಿಕ್ಕೆ ರೆಡಿಯಾಗಿ.