ಬೆಂಗಳೂರು: ಕಳೆದ ವರ್ಷ ಭಾರತ ಕ್ರಿಕೆಟ್ ತಂಡ ಮಿಶ್ರ ಫಲಿತಾಂಶವನ್ನು ಕಂಡಿದೆ. 2023ರಲ್ಲಿ ಏಷ್ಯಾ ಕಪ್ ಸೇರಿದಂತೆ ಹಲವು ದ್ವಿಪಕ್ಷೀಯ ಸರಣಿಗಳಲ್ಲಿ ಭಾರತ ತಂಡ ಯಶಸ್ವಿಯಾಗಿದೆ. ಆದರೆ, ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಹಾಗೂ 2023ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್ಗಳಲ್ಲಿ ಟೀಮ್ ಇಂಡಿಯಾದ ಸೋಲು ಅಭಿಮಾನಿಗಳ ಪಾಲಿಗೆ ಕಹಿ ಅನುಭವವಾಗಿದೆ.
ಒಂದು ದಶಕಗಳ ಬಳಿಕ ಐಸಿಸಿ ಟ್ರೋಫಿ ಗೆಲ್ಲುವ ಭಾರತ ತಂಡದ ಕನಸು ಇನ್ನೂ ನನಸಾಗದೆ ಉಳಿದಿದೆ. ಈ ಹಿನ್ನೆಲೆಯಲ್ಲಿ ಈ ವರರ್ಷ ಜೂನ್ ತಿಂಗಳಲ್ಲಿ 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ನಡೆಯಲಿದೆ. ಅಂದ ಹಾಗೆ ಪ್ರಸಕ್ತ ವರ್ಷ ಭಾರತ ಕ್ರಿಕೆಟ್ ತಂಡ ಹಲವು ಮಹತ್ವದ ಟೆಸ್ಟ್ ಸರಣಿಗಳನ್ನು ಆಡಲಿದೆ. ಜನವರಿ-ಮಾರ್ಚ್ನಲ್ಲಿ ಇಂಗ್ಲೆಂಡ್ ತಂಡಕ್ಕೆ 5 ಪಂದ್ಯಗಳ ಟೆಸ್ಟ್ ಸರಣಿಗೆ ಆತಿಥ್ಯ ವಹಿಸಲಿದೆ. ನಂತರ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡು 5 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ.
ಇದಕ್ಕೂ ಮುನ್ನ ತವರಿನಲ್ಲಿ ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಕಾದಾಟ ನಡೆಸಲಿದೆ. ಇದರ ನಡುವೆ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಭಾರತದ ಆಟಗಾರರು ತೊಡಗಲಿದ್ದಾರೆ. ಈ ಐಪಿಎಲ್ ಎಂಎಸ್ ಧೋನಿಗೆ ಕೊನೆಯ ಟೂರ್ನಿ ಹಾಗೂ ರಿಷಭ್ ಪಂತ್ ಕಮ್ಬ್ಯಾಕ್ ಟೂರ್ನಿ ಇದಾಗಿರುವ ಹಿನ್ನೆಲೆಯಲ್ಲಿ ಇದು ಅತ್ಯಂತ ವಿಶೇಷತೆಯಿಂದ ಕೂಡಿರುತ್ತದೆ.
ಜನವರಿ
ದಕ್ಷಿಣ ಆಫ್ರಿಕಾ ಎದುರು ಟೆಸ್ಟ್ ಪಂದ್ಯ
ಜನವರಿ 3 ರಿಂದ 7ರವರೆಗೆ ಕೇಪ್ಟೌನ್
ಅಫಘಾನಿಸ್ತಾನ ವಿರುದ್ಧ ಟಿ20 ಸರಣಿ
ಜ. 11, ಸಂಜೆ 7, ಮೊಹಾಲಿ
ಜ. 14, ಸಂಜೆ 7, ಇಂದೋರ್
ಜ. 17, ಸಂಜೆ 7, ಬೆಂಗಳೂರು
ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ
ಜನವರಿ 25 ರಿಂದ 29 ಮೊದಲನೇ ಟೆಸ್ಟ್, ಹೈದರಾಬಾದ್
ದಕ್ಷಿಣ ಆಫ್ರಿಕಾದಲ್ಲಿ ತ್ರಿಕೋಣ ಸರಣಿ-ಡಿಸೆಂಬರ್ 29 ರಿಂದ ಜನವರಿ 10ರವರೆಗೆ ಭಾರತ, ಅಫಘಾನಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ
ಜನವರಿ 2: ಭಾರತ vs ದಕ್ಷಿಣ ಆಫ್ರಿಕಾ-ಓಲ್ಡ್ ಎಡ್ವರ್ಡಿಯನ್ಸ್ ಕ್ರಿಕೆಟ್ ಕ್ಲಬ್ ಎ ಗ್ರೌಂಡ್, ಜೋಹಾನ್ಸ್ಬರ್ಗ್- 1: 30
ಜನವರಿ 4: ಭಾರತ ವಿರುದ್ಧ ಅಫಘಾನಿಸ್ತಾನ – ಓಲ್ಡ್ ಎಡ್ವರ್ಡಿಯನ್ಸ್ ಕ್ರಿಕೆಟ್ ಕ್ಲಬ್ ಎ ಗ್ರೌಂಡ್, ಜೋಹಾನ್ಸ್ಬರ್ಗ್ – ಮಧ್ಯಾಹ್ನ 1:30
ಫೆಬ್ರವರಿ
ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ
ಎರಡನೇ ಟೆಸ್ಟ್: 2-6, 9:30, ವೈಜಾಗ್
ಮೂರನೇ ಟೆಸ್ಟ್: 15-19, 9:30, ರಾಜ್ಕೋಟ್
ಮಾರ್ಚ್
ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯ
ಐದನೇ ಟೆಸ್ಟ್: ಫೆ 7 ರಿಂದ 11, ಬೆಳಗ್ಗೆ 09:30, ಧರ್ಮಶಾಲಾ
2024ರ ಐಪಿಎಲ್
ಮಾರ್ಚ್ ರಿಂದ ಜೂನ್-ಐಪಿಎಲ್ 2024
ಜೂನ್ 4ರಿಂದ 30ರವರೆಗೆ 2024ರ ಐಸಿಸಿ ಟಿ20 ವಿಶ್ವಕಪ್ 2024
ಜುಲೈ
ಶ್ರೀಲಂಕಾ ಎದುರು ಮೂರು ಒಡಿಐ ಪಂದ್ಯಗಳು
ಸೆಪ್ಟಂಬರ್
ಬಾಂಗ್ಲಾದೇಶ ವಿರುದ್ಧ 2 ಟೆಸ್ಟ್ ಪಂದ್ಯಗಳು
ಅಕ್ಟೋಬರ್
ನ್ಯೂಜಿಲೆಂಡ್ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿ
ನವೆಂಬರ್ 2024-ಜನವರಿ 2025