ಬೆಂಗಳೂರು: ಲೋಕ ಸಮರದ ವೇಳೆ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಗೆ ಮತ್ತೆ ಟ್ರಬಲ್ ಶುರುವಾಗುವ ಸಾಧ್ಯತೆ ಇದೆ.ಅಕ್ರಮ ಅಸ್ತಿ ಪ್ರಕರಣದಲ್ಲಿ ವಿಚಾರಣೆ ನಡೆಸುತ್ತಿರುವ ಕನಕಪುರ ಬಂಡೆಗೆ ಸಿಬಿಐ ಮತ್ತೆ ನೋಟಿಸ್ ನೀಡಿದೆ.ಬಿಜೆಪಿಯವರು ನನ್ನನ್ನ ರಾಜಕೀಯವಾಗಿ ಮುಗಿಸಲು ಪ್ರಯತ್ನ ನಡೆಸುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಗುಡುಗಿದ್ದಾರೆ.
ಯೆಸ್,ಅಕ್ರಮ ಅಸ್ತಿ ಪ್ರಕರಣ ಎದುರಿಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ ಸಿಬಿಐ ಮತ್ತೆ ಶಾಕ್ ನೀಡಿದೆ.ಕೇರಳ ಮೂಲದ ಖಾಸಗಿ ವಾಹಿನಿಯಲ್ಲಿ ಹೂಡಿಕೆ ಮಾಡಿರುವ ವಿವರಗಳನ್ನು ನೀಡುವಂತೆ ಡಿಸಿಎಂ ಡಿಕೆಶಿಗೆ ಸಿಬಿಐ ನೋಟಿಸ್ ಜಾರಿ ಮಾಡಿದೆ.ಖಾಸಗಿ ಚಾನೆಲ್ ಎಂಡಿ ಬಿ.ಎಸ್. ಶಿಜು ಅವರಿಗೆ ಸಿಬಿಐ ಡಿ.ಕೆ.ಶಿವಕುಮಾರ್ ಹಾಗೂ ಅವರ ಪತ್ನಿ ಉಷಾ ಶಿವಕುಮಾರ್ ಸೇರಿದಂತೆ ಅವರ ಜೊತೆ ವ್ಯವಹಾರಿಕ ಪಾಲು ಹೊಂದಿರುವ 32ಕ್ಕೂ ಹೆಚ್ಚು ಮಂದಿಗೆ ಜನವರಿ 11ರಂದು ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ತನ್ನ ಮುಂದೆ ಹಾಜರಾಗುವಂತೆ ಸಿಬಿಐ ಸೂಚಿಸಿದೆ.ಸಿಬಿಐ ಮತ್ತೆ ನೋಟಿಸ್ ನೀಡಿರೋದ್ರಿಂದ ಡಿಕೆಶಿಗೆ ಮತ್ತೆ ಸಂಕಷ್ಟ ಎದುರಾಗುತ್ತೆ ಎನ್ನಲಾಗಿದೆ.
2018ರಲ್ಲಿ ಡಿ.ಕೆ.ಶಿವಕುಮಾರ್ ಸಲ್ಲಿಸಿದ್ದ ಅಫಿಡೆವಿಟ್ ಆಧಾರದ ಮೇಲೆ ಸಿಬಿಐ ನೋಟಿಸ್ ನೀಡಿದೆ. ಅಫಿಡೆವಿಟ್ನಿಲ್ಲಿ ಖಾಸಗಿ ವಾಹಿನಿಯಲ್ಲಿ ಹೂಡಿಕೆ ಮಾಡಿರುವುದಾಗಿ ಘೋಷಣೆ ಮಾಡಿಕೊಂಡ ಕಾರಣಕ್ಕಾಗಿ ವಿವರಣೆ ಕೇಳಿ ನೋಟಿಸ್ ಜಾರಿಗೊಳಿಸಿದೆ.ಡಿಕೆಶಿ ಪುತ್ರ ಮತ್ತು ಇತರ ಕುಟುಂಬ ಸದಸ್ಯರು ವಾಹಿನಿಯಲ್ಲಿ ಮಾಡಿರುವ ಹೂಡಿಕೆಯ ಸಂಪೂರ್ಣ ವಿವರಗಳನ್ನು ನೀಡುವಂತೆ ಸಿಬಿಐ ಕೇಳಿದೆ.
ಇನ್ನು ಅಕ್ರಮ ಅಸ್ತಿ ಪ್ರಕರಣಕ್ಕೆ ಸಬಂಧಪಟ್ಟಂತೆ ಬಿಜೆಪಿ ಸರ್ಕಾರ ನೀಡಿದ್ದ ಅನುಮತಿಯನ್ನ,ಕಾಂಗ್ರೆಸ್ ಸರ್ಕಾರ ವಾಪಸ್ ಪಡೆದುಕೊಂಡಿತ್ತು.ಇದ್ರಿಂದ ಸಿಬಿಐ ತನಿಖೆಯ ವೇಗಕ್ಕೆ ಕಡಿವಾಣ ಬೀಳುತ್ತೆ ಎನ್ನಲಾಗಿತ್ತು.ಆದ್ರೆ,ಇದೀಗ ಹೊಸ ಪ್ರಕರಣಕ್ಕೆ ಸಬಂಧಪಟ್ಟಂತೆ ಸಿಬಿಐ ಡಿಕೆಶಿ ಕುಟುಂಬಕ್ಕೆ ನೋಟಿಸ್ ನೀಡಿದೆ.ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಕೆಶಿ,ನನ್ನನ್ನ ಜೈಲಿಗೆ ಕಳುಹಿಸ್ತೀವಿ ಎಂದು ಕೆಲವರು ಭವಿಷ್ಯ ನುಡಿದಿದ್ದರು.ನನ್ನನ್ನ ರಾಜಕೀಯವಾಗಿ ಮುಗಿಸಲು ಬಿಜೆಪಿಯಿಂದ ಷಡ್ಯಂತ್ರ ಮಾಡಿದೆ ಎಂದು ಗುಡುಗಿದ್ದಾರೆ.
ಒಟ್ಟಾರೆ, ಲೋಕಸಭಾ ಚುನಾವಣೆ ಹೊಸ್ತಿಲಲ್ಲೇ ಡಿಕೆಶಿಗೆ ಸಿಬಿಐ,ಇಡಿ ಇರಿತ ಶುರುವಾಗಿದೆ.ಹೆಚ್ಚು ಸೀಟ್ ಗೆಲ್ಲೋಬೇಕೆಂದು ಉತ್ಸಾಹದಲ್ಲಿರುವ ಡಿಸಿಎಂಗೆ ಇದು ಮುಳ್ಳಾಗಿದೆ.ಹಾಗಾಗಿ, ಸಿಬಿಐ ಚಕ್ರವ್ಯೂಹದಿಂದ ಹೇಗೆ ಹೊರಬರ್ತಾರೆ ಕಾದು ನೋಡ್ಬೇಕಿದೆ.