ಕಳೆದ ವಾರ ಶಾಂತದಿಂದ ಇದ್ದ ಬಿಗ್ ಬಾಸ್ ಮನೆ ಇದೀಗ ಮತ್ತೆ ಅಶಾಂತಿ ಮೂಡಿದೆ. ವಿನಯ್ ಗೌಡ, ತನಿಷಾ ನಡುವೆ ಗಲಾಟೆ ಶುರುವಾಗಿದ್ದು, ತಾರಕಕ್ಕೇರಿದೆ. ಈ ಎಲ್ಲದಕ್ಕೂ ಮುನ್ನ ವರ್ತೂರ್ ಸಂತೋಷ್ ಮನೆಯ ಸ್ಪರ್ಧಿಯೊಬ್ಬರ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಕಿಚನ್’ನಲ್ಲಿ ಕಾರ್ತಿಕ್ ಜೊತೆ ಮಾತನಾಡುತ್ತಿದ್ದ ವೇಳೆ, ವರ್ತೂರ್ ಸಂತೋಷ್ ಈ ಮಾತನ್ನು ಹೇಳಿದ್ದಾರೆ.
ಅಂದಹಾಗೆ ಕಾರ್ತಿಕ್, ಸಂತೋಷ್ ಬಳಿ “ಈ ಮನೆಯಲ್ಲಿ ನವಗ್ರಹಗಳಿದ್ದೇವೆ. ಶನಿ ಯಾರು?” ಎಂದು ಕೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಸಂತೋಷ್, “ವಿನಯ್ ಗೌಡ ಮೊದಲನೇ ಶನಿ” ಎಂದಿದ್ದಾರೆ. ಅದಕ್ಕೆ ಮತ್ತೆ ಪ್ರಶ್ನೆ ಮಾಡಿದ ಕಾರ್ತಿಕ್, “ಎರಡನೇ ಶನಿ ಯಾರು?” ಎಂದಿದ್ದಾರೆ. ಅದಕ್ಕೆ ಸಂತೋಷ್ “ನಮ್ರತಾ ಎರಡನೇ ಶನಿ, ಮೂರನೇ ಶನಿ ಸಂಗೀತಾ” ಎಂದು ಹೇಳಿದ್ದಾರೆ.