ಬೀದರ್- ಅನೈತಿಕ ಸಂಬಂಧದ ಹಿನ್ನೆಲೆ, ತನ್ನ ಮಿಂಡನ ಜೊತೆ ಸೇರಿ ಖತರ್ನಾಕ್ ಆಂಟಿಯೊಬ್ಬಳು ಗಂಡನ ಕೊಲೆ ಮಾಡಿಸಿರುವ ಘಟನೆ ಬೀದರ್ ನಲ್ಲಿ ಜರುಗಿದೆ. ಅದರ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಹೌದು ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಮಿಂಡನ ಜೊತೆ ಸೇರಿಕೊಂಡು ತಾಳಿ ಕಟ್ಟಿದ ಗಂಡನನ್ನೇ ಖತರ್ನಾಕ್ ಲೇಡಿ ಕೊಲೆ ಮಾಡಿರುವ ಘಟನೆ ಜರುಗಿದೆ.
ಘಟನೆ ಸಂಬಂಧ ಮೃತನ ಹೆಂಡತಿ ಹಾಗೂ ಆಕೆಯ ಪ್ರಿಯಕರನ್ನು ಬೀದರ್ ಪೊಲೀಸರು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ನವೆಂಬರ್ 11ರ 2023ರಂದು ಬೀದರ್ ತಾಲೂಕಿನ ಪೊಮಾ ತಾಂಡಾ- ಅಲಿಯಂಬರ್ ನಡುವಿನ ರಸ್ತೆಯ ಬ್ರಿಡ್ಜ್ ಬಳಿ ಅಮಿತ್ ಎಂಬಾತನ ಮೃತದೇಹ ಪತ್ತೆಯಾಗಿರುತ್ತದೆ.
ಪೊಮಾ ತಾಂಡಾದ ರವಿ ಪಾಟೀಲ್ ಫಾರ್ಮ್ ಹೌಸ್ಗೆ ಹೋಗಿ ವಾಪಸಾಗುತ್ತಿದ್ದ ವೇಳೆ ದ್ವಿಚಕ್ರ ವಾಹನದ ಮೇಲೆ ಬರುತ್ತಿದ್ದ ಅಮಿತ್ಗೆ ರಾಡ್ ನಿಂದ ಹೊಡೆದು ಕೊಲೆ ಮಾಡಿರುತ್ತಾರೆ,. ಕೊಲೆ ಮಾಡಿ ಅಪಘಾತದ ರೀತಿಯಲ್ಲಿ ಬಿಂಬಿಸಲು ಅಮಿತ್ ಪತ್ನಿಯ ಪ್ರೀಯಕರ ರವಿ ಪಾಟೀಲ್ ಸಂಚು ರೂಪಿಸಿರುತ್ತಾನೆ,. ಕೊಲೆಯ ಸಂಚು ರೂಪಿಸಿದ ರವಿ ಪಾಟೀಲ್ ವೆಂಕಟ್ ಗಿರಿಮಾಜೆ, ಆಕಾಶ ಗಿರಿಮಾಜೆ ಅಮಿತ್ ಕೊಲೆಗೆ ಸುಪಾರಿ ಕೊಟ್ಟು,. ಅಮಿತ್ಗೆ ತನ್ನ ಫಾರ್ಮ್ ಹೌಸ್ಗೆ ಕರೆಸುತ್ತಾನೆಂದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಚನ್ನಬಸವಣ್ಣ ಎಸ್.ಎಲ್ ತಿಳಿಸಿದಾರೆ,. ಇನ್ನು ಈ ಹಿಂದೆ ಕೂಡ ಅಮಿತ್ ಕೊಲೆ ಯತ್ನಿಸಿ ವಿಫಲಗೊಂಡಿದ್ದ ರವಿ ಪಾಟೀಲ್ ಎರಡನೇ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದರು ಎಂದು ತಿಳಿದು ಬಂದಿದೆ,. ಅಮಿತ್ ಪತ್ನಿ ಚೈತ್ರಾ ಜೊತೆ ಅನೈತಿಕ ಸಂಬಂಧ ಹೊಂದಿದ್ದ ರವಿ ಪಾಟೀಲ್ ಇವರಿಬ್ಬರ ಸಂಬಂಧದ ಬಗ್ಗೆ ಅಮಿತ್ಗೆ ಅನುಮಾನ ಬಂದಿದ್ದಕ್ಕೆ ಚೈತ್ರಾನೆ ರವಿಗೆ ಏನಾದರೂ ಮಾಡು ಎಂದಿದ್ದಕ್ಕೆ ಕೊಲೆಗೈದಿದ್ದಾರೆಂದು ಸುದ್ದಿಗೋಷ್ಠಿಯಲ್ಲಿ ಎಸ್ಪಿ ಹೇಳಿದರು,. ಪ್ರಕರಣ ಸಂಬಂಧ ರವಿ ಪಾಟೀಲ್, ಪತ್ನಿ ಚೈತ್ರಾ, ಸುಪಾರಿ ಪಡೆದಿದ್ದ ವೆಂಕಟ್ ಮತ್ತು ಆಕಾಶ್ ಅರೆಸ್ಟ್ ಮಾಡಿದ್ದಾರೆ.