ಬೆಂಗಳೂರು: ಕೇರಳ ಮೂಲದ ಜೈಹಿಂದ್ ವಾಹಿನಿಯಲ್ಲಿ ಮಾಡಿರುವ ಹೂಡಿಕೆಯ ವಿವರಗಳನ್ನು ನೀಡುವಂತೆ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸಿಬಿಐ ನೋಟಿಸ್ ಜಾರಿ ಮಾಡಿದೆ.
ಭಾನುವಾರವಷ್ಟೇ ಜೈಹಿಂದ್ ಚಾನಲ್ನ ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್. ಶಿಜು ಅವರಿಗೆ ಸಿಬಿಐ ನೋಟಿಸ್ ಜÁರಿ ಮಾಡಿದ ಬೆನ್ನಲ್ಲೇ ಇದೀಗ, ಡಿ.ಕೆ.ಶಿವಕುಮಾರ್ ಪತ್ನಿ ಉಷಾ ಶಿವಕುಮಾರ್ ಸೇರಿದಂತೆ ಅವರ ಜೊತೆ ವ್ಯವಹಾರಿಕ ಪಾಲು ಹೊಂದಿರುವ 32ಕ್ಕೂ ಹೆಚ್ಚು ಮಂದಿಗೆ ಜನವರಿ 11ರಂದು ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ತನ್ನ ಮುಂದೆ ಹಾಜರಾಗುವಂತೆ ಸಿಬಿಐ ಸೂಚಿಸಿದೆ.
2017-2018ರಲ್ಲಿ ಡಿ.ಕೆ.ಶಿವಕುಮಾರ್ ಸಲ್ಲಿಸಿದ್ದ ಅಫಿಡೆವಿಟ್ ಆಧಾರದ ಮೇಲೆ ಸಿಬಿಐ ನೋಟಿಸ್ ನೀಡಿದೆ. ಅಫಿಡೆವಿಟ್ನಲ್ಲಿ ಜೈ ಹಿಂದ್ ವಾಹಿನಿಯಲ್ಲಿ ಹೂಡಿಕೆ ಮಾಡಿರುವುದಾಗಿ ಘೋಷಣೆ ಮಾಡಿಕೊಂಡ ಕಾರಣಕ್ಕಾಗಿ ವಿವರಣೆ ಕೇಳಿ ನೋಟಿಸ್ ಜಾರಿಗೊಳಿಸಿದೆ.
ಸಿಆರ್ಪಿಸಿ ಸೆಕ್ಷನ್ 91ರಡಿ ಹೊರಡಿಸಲಾದ ನೋಟಿಸ್ನಲ್ಲಿ, ಡಿ.ಕೆ.ಶಿವಕುಮಾರ್ ಮತ್ತು ಅವರ ಪತ್ನಿ ಉಷಾ ಶಿವಕುಮಾರ್ ಅವರು ಮಾಡಿದ ಹೂಡಿಕೆಗಳು, ಅವರಿಗೆ ಪಾವತಿಸಿದ ಲಾಭಾಂಶಗಳು, ಷೇರು ವಹಿವಾಟುಗಳು, ಹಣಕಾಸಿನ ವಹಿವಾಟುಗಳ ಜೊತೆಗೆ ಅವರ ಬ್ಯಾಂಕ್ ವಿವರಗಳನ್ನು ಒದಗಿಸುವಂತೆ ಸಿಬಿಐ ಚಾನಲ್ಗೆ ಕೇಳಿದೆ
ಸಿಆರ್ ಪಿಸಿ ಸೆಕ್ಷನ್ 91 ಅವರು ತನಿಖೆ ನಡೆಸಿದ ಪ್ರಕರಣದ ಬಗ್ಗೆ ದಾಖಲೆಗಳನ್ನು ಸಮನ್ಸ್ ಮಾಡಲು ಪೆÇಲೀಸ್ ತನಿಖಾ ಅಕಾರಿಗೆ ಅಕಾರ ನೀಡುತ್ತದೆ. ಶಿವಕುಮಾರ್ ಅವರ ಪುತ್ರ ಮತ್ತು ಇತರ ಕುಟುಂಬ ಸದಸ್ಯರು ವಾಹಿನಿಯಲ್ಲಿ ಮಾಡಿರುವ ಹೂಡಿಕೆಯ ವಿವರಗಳನ್ನು ಪ್ರಸ್ತುತಪಡಿಸುವಂತೆ ಸಿಬಿಐ ಕೇಳಿದೆ.
ಜೈಹಿಂದ್ ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್.ಶಿಜು ಅವರು ಸಿಬಿಐ ನೋಟಿಸ್ ಸ್ವೀಕರಿಸಿದ್ದು, ಸಂಸ್ಥೆ ಕೋರಿರುವ ಎಲ್ಲಾ ದಾಖಲೆಗಳನ್ನು ಒದಗಿಸುವುದಾಗಿ ತಿಳಿಸಿದ್ದಾರೆ, ಎಲ್ಲಾ ದಾಖಲೆಗಳು ತಮ್ಮ ಬಳಿ ಇವೆ ಮತ್ತು ಯಾವುದೇ ಅಕ್ರಮ ನಡೆಸಿಲ್ಲ ಎಂದು ಹೇಳಿದ್ದಾರೆ.