ಬೆಂಗಳೂರು: ನಗರ ಉಸ್ತುವಾರಿ ಸಚಿವರು ಡಿಕೆ ಶಿವಕುಮಾರ್ ಅವರು ಹಾಗಾಗಿ ಅವರನ್ನು ಭೇಟಿಮಾಡಿ ಹೊಸ ವರ್ಷದ ಶುಭಾಶಯ ತಿಳಿಸಿದೆ ಎಂದು ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಹೇಳಿಕೆ ನೀಡಿದರು.
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬೆಂಗಳೂರು ಅಭಿವೃದ್ಧಿ ಆಗಲಿ, ನಮ್ಮ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತನಾಡಿದ್ದೇನೆ ಂದರು.
ಹೊಸ ವರ್ಷದಂದು ಬಿಜೆಪಿ ಶಾಸಕರ ವಿರುದ್ಧ ಹೊಸ ಬಾಂಬ್ ಸಿಡಿಸಿದ ಸೋಮಶೇಖರ್ ಬೇರೆ ಬಿಜೆಪಿ ಶಾಸಕರು ರಾತ್ರಿ ಬಂದು ಭೇಟಿ ಮಾಡಿ ಹೋಗ್ತಾರೆ ಮಾಧ್ಯಮಗಳ ಕಣ್ಣುತಪ್ಪಿಸಿ ಬರ್ತಾರೆ ನಾನು ಹಗಲು ಹೊತ್ತಲ್ಲಿ ರಾಜಾರೋಷವಾಗಿ ಬರ್ತೆನೆ ರಾಜಾರೋಷವಾಗಿ ಬಂದು ಮಾತನಾಡಿಕೊಂಡು ಹೋಗುತ್ತೇನೆ ಯಾವುದೇ ಮುಚ್ಚುಮರೆ ಇಲ್ಲ ಪದೆ ಪದೇ ಡಿಸಿಎಂ ಭೇಟಿಗೆ ಸೋಮಶೇಖರ್ ಕಾರವಾಗಿ ಉತ್ತರ ನೀಡಿದರು.