ದಾವಣಗೆರೆ: ಕೋರೊನಾದಲ್ಲಿ 40 ಸಾವಿರ ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂಬ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಆರೋಪದಲ್ಲಿ ಯಾವುದೇ ಹುರಳಿಲ್ಲ. ಅಷ್ಟೊಂದು ಪ್ರಮಾಣದಲ್ಲಿ ಅವ್ಯವಹಾರ ಆಗಿದ್ದರೆ ನಾನೇ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ ಸವಾಲು ಹಾಕಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಬಸನಗೌಡ ಪಾಟೀಲ್ ಯತ್ನಾಳಗೆ ಆರೋಪ ಸಾಬೀತು ಮಾಡಿ. ನೀವು ಮಾಡಿರುವ ಆರೋಪಗಳ ಬಗ್ಗೆ ದಾಖಲೆ ಸಮೇತ ಚರ್ಚೆಗೆ ಬನ್ನಿ, ನಾನೂ ಬರ್ತೀನಿ ಎಂದು ಯತ್ನಾಳಗೆ ಸವಾಲು ಹಾಕಿದರು. ಇನ್ನು ವಿಜಯಪುರದಲ್ಲಿ ಪ್ರಭಾವಿ ಸಚಿವರ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಈ ಸರ್ಕಾರದಲ್ಲಿ ಕೆಲಸ ಮಾಡಿಕೊಂಡು ಆರೋಪ ಮಾಡೋದು ಬಿಡಬೇಕು.
Curry Leaves: ಕರಿಬೇವಿನ ಎಲೆಗಳು ಅಡುಗೆಗೂ ಸೈ, ಆರೋಗ್ಯಕ್ಕೂ ಸೈ..! ಇದರಿಂದಿವೆ ಅನೇಕ ಪ್ರಯೋಜನ
ಕೋವಿಡ್ ನಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾಗ 40 ಸಾವಿರ ಕೋಟಿ ರೂ ಹಗರಣ ನಡೆದಿದೆ ಎಂದಿದ್ದಾರೆ. ಆಗ ಇವರು ಶಾಸಕರಾಗಿದ್ದರು. ನಾವು ಕೂಡ ಮಾಸ್ಕ್, ಆಕ್ಸಿಜೆನ್ ಸೇರಿ ಯಾವುದಕ್ಕೆ ಎಷ್ಟೆಷ್ಟು ಖರ್ಚಾಗಿದೆ ಎಂದು ಸದನದಲ್ಲಿಯೇ ದಾಖಲೆ ತೋರಿಸಿದ್ದೇವೆ. ಯತ್ನಾಳ ಕೂಡ ಶಾಸಕರಾಗಿದ್ದವರು ಆಗ ಯಾಕೆ ಮಾತನಾಡಲಿಲ್ಲ, ಈಗ ಆರೋಪ ಮಾಡುತ್ತಿದ್ದಾರೆ. ಇವರು ಗಾಳಿಯಲ್ಲಿ ಗುಂಡು ಹೊಡೆಯುವುದನ್ನು ಬಿಡಬೇಕು ಎಂದರು.