ಎಕ್ಕದ ಗಿಡ ಎಲ್ಲರಿಗೂ ಪರಿಚಯವಿರುತ್ತೆ. ಇದರಲ್ಲಿ ಎರಡು ರೀತಿಯ ಹೂವುಗಳಿದ್ದು, ಬಿಳಿ ಎಕ್ಕದ ಗಿಡ ಹಾಗೂ ನೀಲಿ ಎಕ್ಕದ ಗಿಡವೆಂದು ಕರೆಯುತ್ತಾರೆ. ಇದನ್ನು ದೇವರ ಪೂಜೆಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ. ಕೇವಲ ಧಾರ್ಮಿಕವಾಗಿಯೊಂದೇ ಅಲ್ಲದೇ, ಮನೆಮದ್ದಾಗಿಯೂ ಬಳಸುತ್ತಾರೆ. ಅದರಲ್ಲೂ ಬಿಳಿ ಎಕ್ಕದ ಗಿಡದಲ್ಲಿರುವ ಎಲೆಗಳು, ಹಣ್ಣುಗಳು, ಹಾಲು, ಹೂವುಗಳನ್ನು ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಬಳಸಬಹುದು.
ಜೀರ್ಣಕ್ರಿಯೆಗೆ ಸಹಾಯಕ: ಎಕ್ಕದ ಗಿಡದ ಎಲೆಗಳು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಅಜೀರ್ಣ ಅಥವಾ ಹೊಟ್ಟೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಯಿಂದ ಬಳಲುತ್ತಿದ್ದರೆ ಎಕ್ಕದ ಗಿಡದ ಎಲೆಗಳು ಹೆಚ್ಚು ಪ್ರಯೋಜನಕಾರಿಯಾಗಿದೆ. ಯಾವುದೇ ರೀತಿಯ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯನ್ನು ನಿವಾರಿಸಲು ಇದು ನಿಮಗೆ ಸಹಾಯ ಮಾಡುತ್ತದೆ.
ಮೂಲವ್ಯಾದಿ ಕಡಿಮೆ: ಯಾರಾದರೂ ಮೂಲವ್ಯಾದಿ(ಪೈಲ್ಸ್)ಯಿಂದ ಬಳಲುತ್ತಿದ್ದರೆ, ಎಕ್ಕದ ಗಿಡವು ಮೂಲಿಕೆಯಾಗಿದೆ. ಎಕ್ಕದ ಎಲೆಗಳನ್ನು ಬಳಸುವುದು ಪೈಲ್ಸ್ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ. ಇದಕ್ಕಾಗಿ ಅವರು ಎಕ್ಕದ ಎಲೆಗಳನ್ನು ಸುಟ್ಟು ಅದರ ಹೊಗೆಯನ್ನು ನಿಯಮಿತವಾಗಿ ತೆಗೆದುಕೊಳ್ಳಬೇಕು. ಹೀಗೆ ಮಾಡುವುದರಿಂದ ಮೂಲವ್ಯಾದಿಯ ತುರಿಕೆ ಮತ್ತು ನೋವು ಬೇಗನೆ ಶಮನವಾಗುತ್ತದೆ. ಉರಿಯೂತವನ್ನು ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ.
ಉಬ್ಬಸಕ್ಕೆ ಪರಿಹಾರ: ಉಬ್ಬಸಕ್ಕೂ ಕೂಡ ಎಕ್ಕದ ಗಿಡದಲ್ಲಿ ಮದ್ದಿದೆ. ಎಕ್ಕದ ಗಿಡದಿಂದ ಕೆಲವು ಒಣಗಿದ ಹೂವುಗಳನ್ನು ತೆಗೆದುಕೊಂಡು ಪುಡಿ ಮಾಡಿ, ನಂತರ ಅದಕ್ಕೆ ಸ್ವಲ್ಪ ಕಲ್ಲುಪ್ಪನ್ನು ಸೇರಿಸಿ. ಅದಾದ ಬಳಿಕ ಈ ಮಿಶ್ರಣವನ್ನು ಪುಡಿಯ ರೂಪದಲ್ಲಿ ಅಥವಾ ಬೆಚ್ಚಗಿನ ನೀರಿನಿಂದ ಸೇವಿಸಬೇಕು. ಇದರಿಂದ ಹೊಟ್ಟೆ ಉಬ್ಬಸ ಕಡಿಮೆ ಆಗುವುದರ ಜೊತೆ ಆಸ್ತಮಾ, ಕೆಮ್ಮು, ಶೀತ ಮತ್ತು ಇತರ ಅನೇಕ ಸಮಸ್ಯೆಗಳಿಂದ ತ್ವರಿತ ಪರಿಹಾರವನ್ನು ನೀಡುತ್ತದೆ.
ಕಾಲರಾ ಶಮನ: ಕಾಲರಾವನ್ನು ಗುಣಪಡಿಸಲು ಪ್ರಾಚೀನ ಕಾಲದಿಂದಲೂ ಎಕ್ಕದ ಸಸ್ಯಗಳನ್ನು ಬಳಸಲಾಗುತ್ತದೆ. ಸರಳವಾಗಿ ಎಕ್ಕದ ಶುದ್ಧ ಬೇರಿನ ತೊಗಟೆಯನ್ನು ತೆಗೆದುಕೊಂಡು ಅದನ್ನು ಒಣಗಿಸಿ. ಈಗ ಅದನ್ನು ಪುಡಿ ಮಾಡಿ. ಅದಕ್ಕೆ ಶುಂಠಿ ರಸ ಮತ್ತು ಕರಿಮೆಣಸು ಸೇರಿಸಿ ಮಿಶ್ರಣ ಮಾಡಬೇಕು. ಸಿದ್ಧವಾದ ನಂತರ, ಅದನ್ನು ಬಟಾಣಿ ಗಾತ್ರದ ಸಣ್ಣ ಉಂಡೆಗಳಾಗಿ ಸುತ್ತಿಕೊಳ್ಳಿ. ಈಗ ಪ್ರತಿ 2 ಗಂಟೆಗಳ ನಂತರ ಒಂದು ಚಮಚ ಪುದೀನಾ ರಸದೊಂದಿಗೆ ಒಂದು ಚಿಕ್ಕ ಉಂಡೆಯನ್ನು ತೆಗೆದುಕೊಳ್ಳಿ, ಇದು ಕಾಲರಾವನ್ನು ಗುಣಪಡಿಸಬಹುದು.
ಮಧುಮೇಹ ಗುಣವಾಗುತ್ತೆ: ಎಕ್ಕದ ಗಿಡದಿಂದ ಮಧುಮೇಹ ಗುಣವಾಗುತ್ತದೆ. ಇತ್ತೀಚಿನ ದಿನಗಳಲ್ಲಿ, ಮಧುಮೇಹ ರೋಗವು ತುಂಬಾ ಸಾಮಾನ್ಯವಾಗಿದೆ. ಎಕ್ಕದ ಗಿಡದ ಎಲೆಗಳು ಮಧುಮೇಹಕ್ಕೆ ತುಂಬಾ ಪ್ರಯೋಜನಕಾರಿ. ಇದಕ್ಕಾಗಿ ಪ್ರತಿದಿನ ಬೆಳಗ್ಗೆ ಎಕ್ಕದ ಎಲೆಗಳನ್ನು ಪಾದದ ಕೆಳಗೆ ಇರಿಸಿ ಮತ್ತು ಅವುಗಳ ಮೇಲೆ ಸಾಕ್ಸ್ ಧರಿಸುವುದು. ಮಲಗುವ ಮುನ್ನ ಈ ಎಲೆಗಳನ್ನು ತೆಗೆಯಲು ಮರೆಯಬೇಡಿ. ಇದು ಡಯಾಬಿಟಿಸ್ ನಿಯಂತ್ರಿಸಲು ನಿಮಗೆ ಸಹಾಯ ಮಾಡುತ್ತದೆ.
ಚರ್ಮದ ತ್ವಚೆ ಹೆಚ್ಚಳ: ಎಕ್ಕದ ಹಾಲು ತ್ವಚೆಗೆ ತುಂಬಾ ಪ್ರಯೋಜನಕಾರಿಯಾಗಿದ್ದು, ಅನೇಕ ರೀತಿಯ ಚರ್ಮದ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ. ಅದರ ಹಾಲನ್ನು ಚರ್ಮದ ಸೋಂಕು, ಉರಿತ ಅಥವಾ ಗಾಯಗಳನ್ನು ಕಡಿಮೆ ಮಾಡುತ್ತದೆ.