ಕನ್ನಡದ ಬಿಗ್ ಬಾಸ್ (Bigg Boss) ಮನೆಯ ಮೂವರು ಸದಸ್ಯರ ಮೇಲೆ ದೂರು ದಾಖಲಾಗಿ ಸಾಕಷ್ಟು ಸುದ್ದಿ ಆಗಿತ್ತು. ಹುಲಿ ಉಗುರಿನ ವಿಚಾರಕ್ಕೆ ವರ್ತೂರು ಸಂತೋಷ್ ಜೈಲು ವಾಸವನ್ನೂ ಅನುಭವಿಸಬೇಕಾಯಿತು. ಜಾತಿ ನಿಂದನೆ ಆರೋಪದಡಿ ತನಿಷಾ ಕುಪ್ಪಂಡ ಮೇಲೆ ದೂರು ದಾಖಲಾಗಿತ್ತು. ಡ್ರೋನ್ ಪ್ರತಾಪ್ ಮೇಲೆ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ವೈದ್ಯರೊಬ್ಬರು ಮಾತನಾಡಿದ್ದರು. ಈ ಘಟನೆಗಳ ಬೆನ್ನಲ್ಲೆ ಹಿಂದಿ ಬಿಗ್ ಬಾಸ್ ಮನೆಯ ಸದಸ್ಯರೊಬ್ಬರ ಮೇಲೆ ಬಟ್ಟೆ ಕಳ್ಳತನ ಮಾಡಿದ ಆರೋಪ ಬಂದಿದೆ.
ಹಿಂದಿ ಬಿಗ್ ಬಾಸ್ ಸೀಸನ್ 17 ಇದೀಗ ಫಿನಾಲೆ ಹಂತ ತಲುಪಿದೆ. ಈ ಹೊತ್ತಿನಲ್ಲಿ ಬಿಗ್ ಬಾಸ್ ಸ್ಪರ್ಧಿ ಸನಾ ರಯೀಸ್ ಖಾನ್ (Sana Raees Khan) ಮೇಲೆ ಬಟ್ಟೆ ಹಾಗೂ ಆಭರಣದ ಕಳ್ಳತನದ ಆರೋಪ ಬಂದಿದೆ. ಸನಾ ರಯೀಸ್ ಖಾನ್ ಬಿಗ್ ಬಾಸ್ ಮನೆಯಲ್ಲಿದ್ದಾಗ ಸೆಲೆಬ್ರಿಟಿ ಸ್ಟೈಲಿಸ್ಟ್ ಆಗಿರುವ ಖುಷ್ಭೂ ರಾವತ್ ಎನ್ನುವವರು ಸನಾಗೆ ಬಟ್ಟೆಗಳನ್ನು ಡಿಸೈನ್ ಮಾಡಿದ್ದರಂತೆ. ಆ ಉಡುಪು ಹಾಗೂ ಆಭರಣವನ್ನು ಖಷ್ಭೂಗೆ ವಾಪಸ್ಸು ಮಾಡಿಲ್ಲ ಎಂದು ಆರೋಪಿಸಿದ್ದಾರೆ
ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಖುಷ್ಭೂ, ಹಲವಾರು ವರ್ಷಗಳಿಂದ ನಾನು ಬಿಗ್ ಬಾಸ್ ಮನೆಯ ಸದಸ್ಯರಿಗೆ ಕಾಸ್ಟ್ಯೂಮ್ ಡಿಸೈನ್ ಮಾಡಿರುವೆ. ಪ್ರತಿ ಬಾರಿಯೂ ಶ್ರಮ ಪಡುವೆ. ಆದರೆ, ಈ ಬಾರಿ ಇಂಥದ್ದೊಂದು ಕೆಟ್ಟ ಅನುಭವ ಆಗಿದೆ ಎಂದು ಅವರು ಬರೆದುಕೊಂಡಿದ್ದಾರೆ.