ಧಾರವಾಡ: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಪೂಲೀಸರು, ಮಧ್ಯಪ್ರದೇಶದಲ್ಲಿ ಅಡಗಿ ಕುಳಿತಿದ್ದ ದೇಶದ ಖ್ಯಾತ ಮುಪ್ತಿಯೊಬ್ಬನನ್ನು ಬಂಧಿಸಿದ್ದರು. ಜೈಲು ಪಾಲಾಗಿರುವ ಮೌಲ್ವಿ ಪ್ರಕರಣದಲ್ಲಿ ಸ್ಫೋಟಕ ಸತ್ಯವೊಂದು ಹೊರ ಬಿದ್ದಿದೆ. ಆರೋಪಿ ಗುಲಾಮ ಜಿಲಾನಿ ಅಜಹರಿ ಅಸಲಿಗೆ ಭಾರತೀಯನೇ ಅಲ್ಲ ಎಂದು ತಿಳಿದು ಬಂದಿದ್ದು, ನಕಲಿ ದಾಖಲೆಗಳನ್ನು ಸೃಷ್ಠಿಸಿಕೊಂಡು ದೇಶದಲ್ಲಿ ನೆಲೆಸಿದ್ದ ಎಂದು ಪೊಲೀಸರ (Police) ತನಿಖೆ ವೇಳೆ ತಿಳಿದು ಬಂದಿದೆ.
ನೇಪಾಳ ಪೌರತ್ವ ಹೊಂದಿರುವ ಆರೋಪಿ, ಮಧ್ಯಪ್ರದೇಶದ (Madhya Pradesh) ಖಂಡವಾಗೆ ಆರು ವರ್ಷಗಳ ಹಿಂದೆ ಬಂದು ನೆಲೆಸಿದ್ದ. ಇಲ್ಲಿಗೆ ಬಂದ ಮೇಲೆ ನಕಲಿ ಆಧಾರ್ ಕಾರ್ಡ್, ಪಾನ್ ಕಾರ್ಡ್ ಹಾಗೂ ಮತದಾರರ ಚೀಟಿ ಮಾಡಿಸಿಕೊಂಡಿದ್ದಾನೆ. ಅಲ್ಲಿಯೇ ಮದರಸಾವನ್ನು ಸಹ ಕಟ್ಟಿಕೊಂಡಿದ್ದ. ಭಾರತದ ಅನೇಕ ರಾಜ್ಯಗಳಲ್ಲಿ ಓಡಾಡಿಕೊಂಡಿದ್ದ ಈತ ಧಾರ್ಮಿಕ ಪ್ರವಚನ ನೀಡಿ ಜನಮನ್ನಣೆ ಗಳಿಸಿದ್ದ. ಅಲ್ಲದೇ ಭಾರತದ ಹೆಸರಾಂತ ಧಾರ್ಮಿಕ ಪ್ರವಚನಕಾರರ ವಿರುದ್ಧ ಹೇಳಿಕೆ ಕೊಡುತ್ತಿದ್ದ.
Curry Leaves: ಕರಿಬೇವಿನ ಎಲೆಗಳು ಅಡುಗೆಗೂ ಸೈ, ಆರೋಗ್ಯಕ್ಕೂ ಸೈ..! ಇದರಿಂದಿವೆ ಅನೇಕ ಪ್ರಯೋಜನ
ಆರೋಪಿಗೆ ನೇಪಾಳದಲ್ಲಿ ಶೇರ್ ಎ ನೇಪಾಳ ಎಂದು ಕರೆಯಲಾಗುತ್ತಿತ್ತು. ಈಗಾಗಲೇ ಎರಡು ಮದುವೆಯಾಗಿದ್ದ ಆರೋಪಿ, ಮೊದಲನೇ ಪತ್ನಿ ನೇಪಾಳದವಳಾಗಿದ್ದು, ಆಕೆಗೆ ಡಿವೋರ್ಸ್ ನೀಡಿದ್ದ. ಬಳಿಕ ಭಾರತಕ್ಕೆ ಬಂದು ನೆಲೆಸಿದ್ದ. ನೇಪಾಳದಲ್ಲಿ ಈತನ ಕುಟುಂಬವಿದ್ದು, ಅಲ್ಲಿಗೆ ಆಗಾಗ ಹೋಗಿ ಬರುತ್ತಿದ್ದ ಎಂದು ತಿಳಿದು ಬಂದಿದೆ. ಆರೋಪಿಯ ವಿರುದ್ಧ, ಯುವತಿಯೊಬ್ಬಳು, ಮತ್ತು ಬರುವ ಔಷಧಿ ನೀಡಿ ಅತ್ಯಾಚಾರ ಮಾಡಿದ್ದಾನೆ ಎಂದು ಆರೋಪಿಸಿದ್ದಾಳೆ.
ಮೌಲ್ವಿ ಮದುವೆ ಮಾಡಿಕೊಳ್ಳುವುದಾಗಿ ಹೇಳಿ ಎರಡು ವರ್ಷಗಳ ಕಾಲ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ. ಅಲ್ಲದೇ ಗುಲಾಮ ಜಿಲಾನಿ ಅಜಹರಿ, ಒಟ್ಟು ನಾಲ್ಕು ಬಾರಿ ಆಕೆಗೆ ಗರ್ಭಪಾತ ಮಾಡಿಸಿದ್ದಾನೆ ಎನ್ನಲಾಗಿದೆ. ಆಕೆ ಮತ್ತೆ ಐದನೇ ಬಾರಿಗೆ ಗರ್ಭಿಣಿಯಾದ ಬಳಿಕ ಆಕೆಯನ್ನು ಹುಬ್ಬಳ್ಳಿಯಲ್ಲಿರುವ ಯುವತಿಯ ಮನೆಯಲ್ಲಿ ಬಿಟ್ಟು, ನನ್ನ ನಿನ್ನ ನಡುವೆ ಯಾವ ಸಂಬಂಧ ಉಳಿದಿಲ್ಲ. ಈ ವಿಷಯ ಬಹಿರಂಗಪಡಿಸಿದರೆ ನಿನ್ನನ್ನು ಮತ್ತು ನಿನ್ನ ಕುಟುಂಬವನ್ನು ಸುಮ್ಮನೇ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.