ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕಾಟೇರ’ ಸಿನಿಮಾ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಅಭೂತಪೂರ್ವ ಯಶಸ್ಸನ್ನು ಅಭಿಮಾನಿಗಳ ಜೊತೆ ಸಂಭ್ರಮಿಸಲು ಚಿತ್ರತಂಡ ಸಿದ್ದವಾಗಿದೆ.
ಇಂದು ಸಂಜೆ 6.30ಕ್ಕೆ ಬೆಂಗಳೂರಿನ ಒರಾಯನ್ ಮಾಲ್ನಲ್ಲಿ ಕಾಟೇರ ಚಿತ್ರದ ಸಕ್ಸಸ್ ಸಂಭ್ರಮ ನಡೆಯಲಿದೆ. ನಟ ದರ್ಶನ್ ಸೇರಿದಂತೆ ಇಡೀ ಚಿತ್ರತಂಡ ಈ ಸಂಭ್ರಮದಲ್ಲಿ ಭಾಗಿಯಾಗಲಿದೆ. ಈ ಸಕ್ಸಸ್ ಸಮಾರಂಭಕ್ಕೆ ತಮ್ಮ ಎಲ್ಲಾ ಸೆಲೆಬ್ರಿಟಿಸ್ಗಳಿಗೂ ಡಿ ಬಾಸ್ ಆತ್ಮೀಯ ಸುಸ್ವಾಗತ ಕೋರಿದ್ದಾರೆ.
ಕೇವಲ ಕನ್ನಡದಲ್ಲಿ ಮಾತ್ರ ತೆರೆಕಂಡ ಕಾಟೇರ ಚಿತ್ರ ಕರ್ನಾಟಕದ ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆ ಬರೆದಿದೆ. ಕಾಟೇರ ಸಿನಿಮಾ ರಿಲೀಸ್ ಆಗಿ ಒಂದೇ ದಿನಕ್ಕೆ ಬರೋಬ್ಬರಿ 19.79 ಕೋಟಿ ರೂಪಾಯಿ ಕೊಳ್ಳೆ ಹೊಡೆದಿತ್ತು. ಎರಡನೇ ದಿನ 17.35 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಮೊದಲ ದಿನ ಮತ್ತು ಎರಡನೇ ದಿನ ಸೇರಿ ಒಟ್ಟು ಎರಡು ದಿನಕ್ಕೆ 37.14 ಕೋಟಿ ರೂಪಾಯಿ ಕಾಟೇರನ ಜೋಳಿಗೆ ಸೇರಿದೆ. ಹಾಗಾಗಿ ಸಹಜವಾಗಿಯೇ ಚಿತ್ರತಂಡ ಮತ್ತು ಡಿ ಬಾಸ್ ಸೆಲೆಬ್ರಿಟಿಸ್ ಸಂಭ್ರಮಿಸುತ್ತಿದ್ದಾರೆ.
ಸೆಲೆಬ್ರಿಟಿಸ್ ಜೊತೆ ‘ಕಾಟೇರ’ ಸಕ್ಸಸ್ ಸಂಭ್ರಮ
ನಟ ದರ್ಶನ್, ನಟಿ ಆರಾಧನಾ ರಾಮ್, ನಿರ್ದೇಶಕ ತರುಣ್ ಸುಧೀರ್, ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ಸಂಗೀತ ನಿರ್ದೇಶಕ ವಿ. ಹರಿಕೃಷ್ಣ, ಸಿನಿಮಾಟೋಗ್ರಫರ್ ಸುಧಾಕರ್ ಎಸ್.ರಾಜ್, ಶ್ರುತಿ, ಕುಮಾರ್ ಗೋವಿಂದ್, ಮಾಸ್ಟರ್ ರೋಹಿತ್, ಬಿರಾದಾರ್, ರವಿ ಚೇತನ್ ಸೇರಿದಂತೆ ಇಡೀ ಚಿತ್ರತಂಡ ‘ಕಾಟೇರ’ ಸಕ್ಸಸ್ ಸಂಭ್ರಮ ಭಾಗಿಯಾಗಲಿದೆ.