ರಾಯಚೂರು: ಹೊಸ ವರ್ಷಾಚರಣೆ (New Year) ಹಿನ್ನೆಲೆ ಮಂತ್ರಾಲಯದ (Mantralaya) ಗುರು ರಾಘವೇಂದ್ರ ಸ್ವಾಮಿ ಮಠಕ್ಕೆ (Raghavendra Swamy Mutt) ವಿವಿಧೆಡೆಯಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರ (Devotees) ದಂಡು ಹರಿದು ಬಂದಿದೆ.
ಶನಿವಾರದಿಂದ ಈವರೆಗೂ ಸುಮಾರು 1 ಲಕ್ಷ ಭಕ್ತರು ರಾಯರ ದರ್ಶನ ಪಡೆದಿದ್ದಾರೆ. ಭಕ್ತರ ಸಂಖ್ಯೆ ಹೆಚ್ಚಾದ ಹಿನ್ನೆಲೆ ಇಂದು ಬೆಳಗಿನ ಜಾವ ನಾಲ್ಕು ಗಂಟೆಯಿಂದಲೇ ರಾಯರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ನಾಲ್ಕು ಪ್ರತ್ಯೇಕ ಸರತಿ ಸಾಲುಗಳ ಮೂಲಕ ರಾಯರ ಮೂಲ ಬೃಂದಾವನ ದರ್ಶನಕ್ಕೆ ಅವಕಾಶ ನೀಡಲಾಗಿತ್ತು.
Bank Holidays: ಬ್ಯಾಂಕ್ ಗ್ರಾಹಕರೇ ಗಮನಿಸಿ.. 2024ರ ಜನವರಿಯಲ್ಲಿ ಬರೋಬ್ಬರಿ 16 ದಿನ ಬ್ಯಾಂಕ್ ರಜೆ!
ಹೊಸ ವರ್ಷದಂದು ರಾಯರ ಕೃಪೆಗೆ ಪಾತ್ರರಾಗಲು ಭಕ್ತರು ವಿವಿಧ ರಾಜ್ಯಗಳಿಂದ ಆಗಮಿಸಿದ್ದಾರೆ. ಕ್ಯಾಲೆಂಡರ್ ಹೊಸ ವರ್ಷವಾಗಿರುವುದರಿಂದ ಮಠದಲ್ಲಿ ಯಾವುದೇ ವಿಶೇಷ ಪೂಜೆಗಳನ್ನ ನೇರವೇರಿಸಿಲ್ಲ. ಎಂದಿನಂತೆ ಬೆಳಗ್ಗೆ ನಿತ್ಯದ ಪೂಜೆಯನ್ನು ಮಾಡಲಾಗಿದೆ.