ಬೆಳಗಾವಿ: ಮುಂದಿನ ಚುನಾವಣೆಗೆ ನನ್ನ ಮಗನಿಗೆ ಟಿಕೆಟ್ ಪಡೆಯೋಕೆ ಪ್ರಯತ್ನಿಸುತ್ತಿದ್ದೇನೆ. ಟಿಕೆಟ್ ಕೊಟ್ಟರೇ ಹಾವೇರಿಯಿಂದ ಸ್ಪರ್ಧಿಸುತ್ತಾನೆ ಎಂದು ಕೆ.ಎಸ್ ಈಶ್ವರಪ್ಪ (KS Eshwarappa) ಹೇಳಿದ್ದಾರೆ. ಬೆಳಗಾವಿ (Belagavi) ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಈಶ್ವರಪ್ಪ ಅವರು,
ಮುಂದಿನ ಚುನಾವಣೆಗೆ ನನ್ನ ಮಗ ಕಾಂತೇಶ್ಗೆ ಟಿಕೆಟ್ ಪಡೆಯಬೇಕು ಅಂತ ಪ್ರಯತ್ನಿಸುತ್ತಿದ್ದೇನೆ. ಟಿಕೆಟ್ ಕೊಟ್ಟರೆ ಚುನಾವಣೆಗೆ ನಿಲ್ಲಿಸುತ್ತೇನೆ. ಹಾವೇರಿಯಿಂದ ಕಾಂತೇಶ್ ಸ್ಪರ್ಧೆ ಮಾಡ್ತಾನೆ ಎಂದು ಹೇಳಿದ್ದಾರೆ. ಇದೇ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು,
ಬಾಲಿವುಡ್ ಅಂಗಳದಲ್ಲಿ ಮದುವೆಯ ಕಲರವ: ಮಗಳ ಮದುವೆಯಲ್ಲಿ ಬ್ಯುಸಿಯಾದ ನಟ ಆಮೀರ್ ಖಾನ್
ಸಿದ್ದರಾಮಯ್ಯ (Siddaramaiah) ಅವರು ಅಹಿಂದ ಅಂತ ಹೋಗುತ್ತಿದ್ದರು. ಆದ್ರೆ ಹಿಂದುಳಿದವರು, ದಲಿತರು ಕೈಬಿಟ್ಟರು, ಇನ್ನು ಉಳಿದಿರೋದು ಅಲ್ಪಸಂಖ್ಯಾತರು (Muslims) ಮಾತ್ರ. ಅವರನ್ನೇ ಬಳಸಿಕೊಂಡು ರಾಜಕೀಯ ಮಾಡಬೇಕು ಅನ್ನೋದು ಸಿದ್ದರಾಮಯ್ಯರ ಲೆಕ್ಕ. ದೇಶದ್ರೋಹಿಗಳಿಗೆ ತೃಪ್ತಿ ಆಗುವ ರೀತಿಯಲ್ಲಿ ಸಿದ್ದರಾಮಯ್ಯ ಮಾತಾಡ್ತಾರೆ ಎಂದಿದ್ದಾರೆ.