ದೇವನಹಳ್ಳಿ:- ಹೊಸ ವರ್ಷಾಚರಣೆ ಹಿನ್ನಲೆ ನಂದಿಬೆಟ್ಟಕ್ಕೆ ತೆರಳಲು ಸಾವಿರಾರು ಜನ ಬೈಕ್ ಸವಾರರು ಕಾದು ಕುಳಿತ ದೃಶ್ಯ ಸೆರೆಯಾಗಿದೆ.
ಮದ್ಯರಾತ್ರಿ 3ಗಂಟೆಯಿಂದ ನಂದಿಬೆಟ್ಟ ಪ್ರವೇಶದ ಚಕ್ ಪೋಸ್ಟ್ ನಲ್ಲಿ ಸಾವಿರಾರು ಬೈಕ್ ಸವಾರರು ಕಾದು ಕುಳಿತಿದ್ದರು. ಏಕಾಏಕಿ ಸಾವಿರಾರು ಬೈಕ್ಸ್ ಒಟ್ಟಿಗೆ ಬಂದ ಹಿನ್ನಲೆ ಟ್ರಾಫಿಕ್ ಜಾಮ್ ಉಂಟಾಗಿದೆ. ನಂದಿಬೆಟ್ಟದ ಮೇಲೆ ಸೂರ್ಯೋದಯ ನೋಡಲು ಸಾವಿರಾರು ಜನ ಆಗಮಿಸಿದ್ದಾರೆ. ಬೆಳಗ್ಗೆ 6ಗಂಟೆಯವರೆಗೂ ನಂದಿಬೆಟ್ಟಕ್ಕೆ ಪ್ರವೇಶ ನಿರ್ಬಂಧ ವಿಧಿಸಲಾಗಿದೆ. ಮೋಜು ಮಸ್ತಿ ಹೆಸರಲ್ಲಿ ಅನಾಹುತಗಳಾಗ್ತವೆ ಎಂಬ ಕಾರಣಕ್ಕೆ ನಂದಿಬೆಟ್ಟ ಪ್ರವೇಶಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾಢಳಿತ ನಿರ್ಬಂಧ ವಿಧಿಸಿತ್ತು. ಇಂದು ಬೆಳಗ್ಗೆ 6ಗಂಟೆಯವರೆಗೂ ಇದ್ದ ನಿರ್ಬಂಧ ತೆರವು ಹಿನ್ನಲೆ, ಏಕಾಏಕಿ ಸಾವಿರಾರು ಬೈಕ್ಗಳಲ್ಲಿ ಸವಾರರು ನಂದಿಬೆಟ್ಟ ಪ್ರವೇಶಿಸಿದ್ದಾರೆ.