ಚಿಕ್ಕಬಳ್ಳಾಪುರ:– ಹಿಂದೂ ವಿರೋಧಿ ಭಾವನೆ ಕಾಂಗ್ರೆಸ್ನ ರಕ್ತದಲ್ಲಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ನವರ ರಕ್ತದ ಕಣದಲ್ಲೂ ಹಿಂದೂ ವಿರೋಧಿ ಭಾವನೆ ಇದೆ ಎಂದರು.
ಸಿದ್ದರಾಮಯ್ಯ ಮುಸ್ಲಿಮರಿಗೆ 11 ಸಾವಿರ ಕೋಟಿ ಖರ್ಚು ಮಾಡುತ್ತಿದ್ದಾರೆ. ಟಿಪ್ಪು ಜಯಂತಿ ಮಾಡಿದರು, ಶಾದಿ ಭಾಗ್ಯ ತಂದರು. ಅವರು ಹಿಂದೂ ವಿರೋಧಿ. ಅದಕ್ಕಾಗಿಯೇ ಇದೆಲ್ಲಾ ಮಾಡಿದ್ದಾರೆ ಎಂದರು.
ಶ್ರೀರಾಮ ಈ ಆದರ್ಶ ಪುರುಷ. ಕಳೆದ 30 ವರ್ಷಗಳಿಂದಲೂ ಬಿಜೆಪಿ ಪ್ರಣಾಳಿಕೆಯಲ್ಲಿ ರಾಮ ಮಂದಿರ ನಿರ್ಮಾಣದ ಬಗ್ಗೆ ಪ್ರಸ್ತಾಪಿಸುತ್ತಿದ್ದೆವು. ಆ ಪ್ರಕಾರ ಮಂದಿರ ಕಟ್ಟಿದ್ದೇವೆ. ಮಂದಿರ ಕಟ್ಟುವುದಷ್ಟೇ ಅಲ್ಲ ರಾಮರಾಜ್ಯ ನಿರ್ಮಾಣವಾಗಬೇಕು ಎನ್ನುವುದು ಬಿಜೆಪಿ ನಿಲುವು ಮತ್ತು ನಮ್ಮ ಗುರಿ ಎಂದರು.
ಹಿಂದೂ ವಿರೋಧಿ ಭಾವನೆ ಕಾಂಗ್ರೆಸ್ನ ರಕ್ತದಲ್ಲಿದೆ. ಕಾಂಗ್ರೆಸ್ ನವರಿಂದ ಹೆಚ್ಚಿಗೆ ಏನೂ ಬಯಸುವುದಿಲ್ಲ. ರಾಮ ಅನ್ನೋದು ಅವರ ಜನ್ಮದಲ್ಲೇ ಬರಲ್ಲ. ಅವರು ಟಿಪ್ಪು ಸಂಸ್ಕೃತಿಯವರು. ರಾಮಜಪ ಮಾಡಿದ ಕಾರಣಕ್ಕೆ ನಾವು ರಾಮಮಂದಿರ ನಿರ್ಮಿಸಿದೇವೆ. ಕಾಂಗ್ರೆಸ್ನವರು ರಾಮಮಂದಿರದ ಬಗ್ಗೆ ಮಾತನಾಡಿಲ್ಲ, ಹೋರಾಟ ಮಾಡಿಲ್ಲ. ನಮ್ಮ ಮೇಲೆ ಗುಂಡು ಹಾರಿಸಿದವರು, ಜೈಲಿಗೆ ಹಾಕುವವರು ಎಂದರು.
ಬಯಲು ಸೀಮೆಯ ಜಿಲ್ಲೆಗಳಿಗೆ ನೀರಿನ ದಾಹ ತೀರಿಸಲು ಎತ್ತಿನಹೊಳೆ ಯೋಜನೆಯನ್ನು ಬಿಜೆಪಿಯ ಸರ್ಕಾರದಲ್ಲಿ ಅಂದಿನ ಮುಖ್ಯಮಂತ್ರಿ ಸದಾನಂದಗೌಡ ಆರಂಭಿಸಿದರು. ಅದು ನಮ್ಮ ಸರ್ಕಾರ ಇದ್ದಾಗ ಹೆಚ್ಚು ಅನುದಾನ ನೀಡಿದೆವು. ಆದರೆ ಈ ಸರ್ಕಾರ ಒಂದು ರೂಪಾಯಿ ಹಣ ಬಿಡುಗಡೆ ಮಾಡಿಲ್ಲ. ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಎಚ್.ಎನ್.ವ್ಯಾಲಿ ನೀರನ್ನು ಮೂರು ಹಂತದಲ್ಲಿ ಶುದ್ದೀಕರೀಸಬೇಕು ಎಂದು ಬಜೆಟ್ ನಲ್ಲಿ ಹಣ ಮೀಸಲಿಟ್ಟಿತ್ತು. ಆದರೆ ಈ ಸಿದ್ದರಾಮಯ್ಯ ಸರ್ಕಾರ ಮೂರನೇ ಹಂತದಲ್ಲಿ ಶುದ್ದೀಕರಿಸುವುದಕ್ಕೆ ಎಳ್ಳು ನೀರು ಬಿಟ್ಟಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.