ಬಳ್ಳಾರಿ:- ಕ್ಷುಲ್ಲಕ ಕಾರಣಕ್ಕೆ ಒರ್ವನ ಕೊಲೆ ನಡೆದಿದ್ದು, ಘಟನೆಯಲ್ಲಿ ಮತ್ತೊಬ್ಬರಿಗೆ ಗಂಭೀರ ಗಾಯವಾಗಿರುವ ಘಟನೆ ಬಳ್ಳಾರಿ ನಗರದ ವಡ್ಡರ ಬಂಡಿಯಲ್ಲಿ ನಡೆದ ಘಟನೆ ಜರುಗಿದೆ.
ಕೇಕ್ ತರಲು ಬೇಕರಿಗೆ ಬಂದಿದ್ದ ಸೈದುಲ್ಲ ಎಂಬುವ ಯುವಕನ ಕೊಲೆ ನಡೆದಿದೆ. ಹೊಸ ವರ್ಷದ ಆಚರಣೆಗೆ ಕೇಕ್ ತರಲು ಸೈದುಲ್ಲ ಬಂದಿದ್ದ. ಈ ವೇಳೆ ಸೈದುಲ್ಲ ಹಾಗೂ ಇತರೆ ಯುವಕರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿದೆ.
ಗಲಾಟೆ ವೇಳೆ ಸೈದುಲ್ಲ(24) ಕೊಲೆ ಆಗಿದ್ದು, ಮತ್ತೋರ್ವ ಯುವಕನಿಗೆ ಗಾಯವಾಗಿದೆ. ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಸ್ಥಳಕ್ಕೆ ಬ್ರೂಸ್ ಪೇಟೆ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.