ಬೆಂಗಳೂರು:– ಹೊಸವರ್ಷಾಚರಣೆಗೆ ಕೆಲವೇ ಗಂಟೆಗಳು ಬಾಕಿ ಇದ್ದು, ನ್ಯೂ ಇಯರ್ ಸೆಲಬ್ರೇಶನ್ಗೆ ಐಟಿ ಸಿಟಿ ಮಂದಿ ಸಜ್ಜಾಗಿದೆ.
ಎಲೆಕ್ಟ್ರಾನಿಕ್ ಸಿಟಿಯಲ್ಲಿ ಐಟಿ ಮಂದಿಯ ಸೆಲಬ್ರೇಶನ್ ಗೆ ಸಿದ್ಧತೆ ನಡೆಸಲಾಗಿದ್ದು, ಮದುವಣಗಿತ್ತಿಯಂತೆ ಹೋಟೆಲ್ ಹಾಗೂ ಪಬ್ ಗಳು ಸಜ್ಜಾಗಿವೆ. ಹೋಟೆಲ್ ಹಾಗೂ ಪಬ್ ಗಳಲ್ಲಿ ವಿಶೇಷ ಲೈಟಿಂಗ್, ಡೆಕೊರೇಷನ್ ಮಾಡಲಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಜನತೆ ಸೇರಲಿದೆ.
ಹೊಸವರ್ಷವನ್ನ ಸಂಭ್ರಮಿಸೋಕೆ ಐಟಿ ಮಂದಿ ತುದಿಗಾಲಿನಲ್ಲಿ ನಿಂತಿದ್ದು, ಈಗಾಗಲೇ ಎಲೆಕ್ಟ್ರಾನಿಕ್ ಸಿಟಿಯತ್ತ ಜನತೆ ಆಗಮಿಸುತ್ತಿದ್ದಾರೆ.
ಅತಿಹೆಚ್ಚು ಐಟಿಬಿಟಿ ಕಂಪನಿಗಳಿರುವ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸಾವಿರಾರು ಸಂಖ್ಯೆಯ ಜನ ಸೇರಲಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.
ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ರಸ್ತೆಯಲ್ಲಿ ಜನಸಾಗರ ತುಂಬಿದ್ದು, ಈಗಾಗಲೇ ರಸ್ತೆ ಸಂಪೂರ್ಣ ಟ್ರಾಫಿಕ್ ಜಾಮ್ ಉಂಟಾಗಿದೆ.
ಹೋಟೆಲ್, ಪಬ್ ಗಳತ್ತ ನ್ಯೂ ಇಯರ್ ಸೆಲಬ್ರೇಷನ್ಗೆ ಜನತೆ ತೆರಳುತ್ತಿದ್ದಾರೆ. ಎಲೆಕ್ಟ್ರಾನಿಕ್ ಸಿಟಿಯ ಗಲ್ಲಿ ಗಲ್ಲಿಗಳಲ್ಲೂ ಜನವೋ ಜನ ತುಂಬಿದೆ.