ಬೆಂಗಳೂರು:- ಗರ್ಲ್ ಫ್ರೆಂಡ್ ಜೊತೆ ಅಸಭ್ಯ ವರ್ತಿಸಿದ ಅಪರಿಚಿತ ವ್ಯಕ್ತಿಗೆ ಪ್ರಿಯತಮ ಧರ್ಮದೇಟು ಕೊಟ್ಟಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ಜರುಗಿದೆ.
ಹೊಸ ವರ್ಷದ ಹಿನ್ನೆಲೆ, ಗರ್ಲ್ ಫ್ರೆಂಡ್ ಜೊತೆ ಬ್ರಿಗೇಡ್ ರಸ್ತೆಗೆ ಯುವಕ ಬಂದಿದ್ದ. ನೂಕು ನುಗ್ಗಲಿನಲ್ಲಿ ಅಪರಿಚಿತ ವ್ಯಕ್ತಿ ಗರ್ಲ್ ಫ್ರೆಂಡ್ ಮುಟ್ಟಿದ ಆರೋಪ ಕೇಳಿ ಬಂದಿದೆ. ತನ್ನ ಹುಡುಗಿ ಮುಟ್ಟಿದವನಿಗೆ ಬಾಯ್ ಫ್ರೆಂಡ್ ಧರ್ಮದೇಟು ಕೊಟ್ಟಿದ್ದಾನೆ.
ಪೊಲೀಸ್ರ ಮದ್ಯಪ್ರವೇಶದಿಂದ ಗಲಾಟೆ ಹತೋಟಿಗೆ ಬಂದಿದೆ. ಬ್ರಿಗೇಡ್ ರಸ್ತೆಯಲ್ಲಿ ಘಟನೆ ಜರುಗಿದೆ.