ಬೆಳಗಾವಿ:- ಮಾಜಿ ಸಚಿವ ಲಕ್ಷ್ಮಣ ಸವದಿ ಅವರಿಗೆ ಬಹಿರಂಗವಾಗಿ ಅವಾಚ್ಯ ಪದ ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಹಾರೋಗೇರಿ ಪುರಸಭೆ ಸದಸ್ಯ ರವಿ ಠಕ್ಕನವರನ್ನು ಅರೆಸ್ಟ್ ಮಾಡಲಾಗಿದೆ.
ಇನ್ನೂ ರವಿ ಠಕ್ಕನ್ನವರ ಬಂಧನ ಹಿನ್ನೆಲೆಯಲ್ಲಿ ಮಾಜಿ ಶಾಸಕ ಪಿ. ರಾಜೀವ್ ಹಾಗೂ ಹಾರೋಗೇರಿ ಠಾಣೆ ಪಿಎಸ್ಐ ಗಿರಿಮಲ್ಲ ಉಪ್ಪಾರ್ ನಡುವೆ ಠಾಣೆಯಲ್ಲಿ ಮಾತಿನ ಚಕಮಕಿ ನಡೆದಿದೆ.
ಹಾರೋಗೇರಿ ಪೊಲೀಸ್ ಠಾಣೆಯಲ್ಲೇ ಪಿ ರಾಜೀವ್ ಮತ್ತು ಪಿಎಸ್ ಐ ವಾಗ್ವಾದ ನಡೆದಿದ್ದು, ಯಾವುದೇ ಕೇಸ್ ದಾಖಲು ಇಲ್ಲದೆ ಪುರಸಭೆ ಸದಸ್ಯ ರವಿ ಠಕ್ಕನವರ ಬಂಧನ ಮಾಡಿದ್ದೀರೆಂದು ಪಿಎಸ್ಐ ಉಪ್ಪಾರ್ ವಿರುಧ್ಧ ಪಿ ರಾಜೀವ್ ಗರಂ ಆಗಿದ್ದಾರೆ.
ಹಾರೂಗೇರಿ ಪೋಲಿಸ್ ಠಾಣೆಯಲ್ಲಿ
ಕೆಲಕಾಲ ಉದ್ವಿಗ್ನ ವಾತಾವರಣ ಇತ್ತು. ಲಕ್ಷ್ಮಣ ಸವದಿಯವರಗೆ ಕ್ಷಮೆ ಕೇಳಿ ಅಂತಾ ಪುರಸಭೆ ಸದಸ್ಯ ರವಿ ಠಕ್ಕನವರಿಗೆ PSI ಅವಾಜ್ ಹಾಕಿದ್ದಾರೆ. ಹಾಗೂ ಇದೇ ವೇಳೆ ಹಿರಿಯ ಅಧಿಕಾರಿಗಳನ್ನು ಬಿಜೆಪಿಯ ಮಾಜಿ ಶಾಸಕ ಹಾಗೂ ಬಿಜೆಪಿ ರಾಜ್ಯ ಕಾರ್ಯದರ್ಶಿ ಪಿ.ರಾಜೀವ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಪಿ ರಾಜೀವ್ ಕುಡಚಿ ಮತಕ್ಷೇತ್ರದ ಮಾಜಿ ಶಾಸಕರಾಗಿದ್ದು, ಪಿ ಎಸ್ ಐ ವಿರುದ್ದ ಡಿಜಿ ಮತ್ತು ಐಜಿ ಕರ್ನಾಟಕ ಹಾಗೂ ಬೆಳಗಾವಿ ಎಸ್ ಪಿ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ದೂರವಾಣಿ ಮೂಕಾಂತರ ಮನವಿ ಮಾಡಿದ್ದಾರೆ.