ಬೆಂಗಳೂರು: ಹೊಸ ವರ್ಷಕ್ಕೆ ಇನ್ನೇನು ಕೌಂಟ್ ಡೌನ್ ಶುರುವಾಗಿದೆ. ಒಂದು ಕಡೆ ಜನ ಹೊಸ ವರ್ಷವನ್ನ ಗ್ರ್ಯಾಂಡ್ ವೆಲ್ ಕಮ್ ಮಾಡಲು ಪಬ್ ಬಾರ್, ರೆಸ್ಟೋರೆಂಟ್ ನ ಮೊರೆ ಹೋದ್ರೆ ಇಲ್ಲೊಬ್ಬ ಯುವಕ 2024 ರ ನೂತನ ದಿನಗಳನ್ನು ವೆಲ್ ಕಮ್ ಮಾಡಲು ಒಂದು ರೂಪಾಯಿ ಟಿ ಶರ್ಟ್ ಗಳನ್ನ ನೀಡುವ ಮೂಲಕ ಸೆಲೆಬ್ರೆಟ್ ಮಾಡಿದ್ದಾನೆ. ಬೆಂಗಳೂರಿನ ಹೊರ ವಲಯದ ರಾಮಮೂರ್ತಿನಗರದಲ್ಲಿರುವ ಬಟ್ಟೆ ಶಾಪ್ ಓಪನ್ ಮಾಡಿದ್ದು,
Diabetes: ಶುಗರ್ ಪೇಶೆಂಟಾ.? ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲು ಈ ಆಹಾರಗಳನ್ನು ಸೇವಿಸಿ..!
ಹೊಸ ವರ್ಷಕ್ಕೆ ಬಿಗ್ ಆಫರ್ ನೀಡಿದ್ದಾನೆ. ಬ್ರ್ಯಾಂಡೆಡ್ ಕಂಪನಿಯ ಟೀ ಶರ್ಟ್ ಗಳನ್ನ ಕೇವಲ ಒಂದು ರೂಗೆ ನೀಡುವ ಮೂಲಕ ಗಮನ ಸೆಳೆದಿದ್ದಾನೆ. ನೂರಾರು ರೂ ಬೆಲೆ ಬಾಳುವ ಟಿ ಶರ್ಟ್ ನ ಒಂದು ರೂಗೆ ಮಾರಾಟ ಆಗ್ತಿದ್ದ ಕಾರಣ ನಾ ಮುಂದು ತಾಮುಂದು ಎಂದು ಅಂಗಡಿ ಮುಂದೆ ನೂರಾರು ಯುವಕರು ಜಮಾಯಿಸಿದ್ದರು. ಒಂದು ರೂ ಕೊಟ್ಟು ಬೇಕಾದ ಟಿ ಶರ್ಟ್ ನ್ನ ಖರೀದಿಸಿ ತೆರೆಳಿದ್ದಾರೆ.