ಹುಬ್ಬಳ್ಳಿ: 2024 ರ ಹೊಸ ವರ್ಷದ ಸ್ವಾಗತಕ್ಕೆ ಹುಬ್ಬಳ್ಳಿ ಧಾರವಾಡ ಅವಳಿನಗರ ಸೇರಿದಂತೆ ಧಾರವಾಡ ಜಿಲ್ಲೆ ಈಗಾಗಲೇ ಸಕಲ ಸಿದ್ಧತೆ ಮಾಡಿಕೊಂಡಿದೆ. ನಗರದ ಪ್ರಮುಖ ಹೋಟೆಲ್ಗಳು ಹಾಗೂ ಕೆಲವು ಬಡಾವಣೆಗಳಲ್ಲಿ ಮನರಂಜನೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಬೇಕರಿ ಅಂಗಡಿಗಳಲ್ಲಿ ತರಹೇವಾರಿ ಕೇಕ್ಗಳು ಸಿದ್ಧಗೊಂಡಿವೆ. ಈ ನಡುವೆ ಪೊಲೀಸ್ ಇಲಾಖೆ ಸಹ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಈ ಕುರಿತು ಒಂದು ವರದಿ.
2023ರ ಕ್ಕೆ ವಿದಾಯಕ್ಕೆ ಕೇಲವೇ ಗಂಟೆಗಳು ಬಾಕಿ ಹೊಸ ವರ್ಷದ ಸ್ವಾಗತಕ್ಕೆ ವಾಣಿಜ್ಯ ನಗರಿ ಹುಬ್ಬಳ್ಳಿಯ ಜನರು ಕಾತುರುದಿಂದ ಕಾಯತಾ ಇದ್ದಾರೆ. ನಗರದ ಪ್ರತಿಷ್ಠಿತ ಹೋಟೆಲ್ಗಳಲ್ಲಿ ಹೊಸ ವರ್ಷ ಸಂಭ್ರಮಾಚರಣೆಗೆ ವಿಶೇಷ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕುಟುಂಬದವರಿಗೆ, ಸ್ನೇಹಿತರ ಗುಂಪಿಗೆ, ಯುವ ಜೋಡಿಗಳಿಗೆ ಹಾಗೂ ವೈಯಕ್ತಿಕವಾಗಿ ಹೋಗುವ ವರಿಗೂ ಅವಕಾಶ ಕಲ್ಪಿಸಲಾಗಿದೆ. ಕೆಲ ಹೋಟೆಲ್ಗಳಲ್ಲಿ ಒಬ್ಬರಿಗೆ ₹1,2 ಹಾಗೂ ₹3 ಸಾವಿರದವರೆಗೆ ಶುಲ್ಕ ನಿಗದಿಪಡಿಸಿ,
ಊಟ ಹಾಗೂ ವಿವಿಧ ಭಕ್ಷ್ಯಗಳ ವ್ಯವಸ್ಥೆ ಮಾಡಲಾಗಿದೆ. ಇನ್ನು ಕೆಲ ಹೋಟೆಲ್ಗಳಲ್ಲಿ ಪ್ರವೇಶ ಶುಲ್ಕ ₹600–₹1000ದವರೆಗೆ ನಿಗದಿಪಡಿಸಿ, ಹೊರಗಡೆಯಿಂದ ಊಟೋಪಾಹಾರ ತರಲು ಅವಕಾಶ ನೀಡಲಾಗಿದೆ. ನಗರದ ಗೋಕುಲ ರಸ್ತೆಯಲ್ಲಿನ ಪ್ರತಿಷ್ಠಿತ ದಿ. ಫರ್ನ್ ಹೊಟೇಲ್ ನಲ್ಲಿ ಸಕಲ ಸಿದ್ಧತೆ ಬಹುತೇಕ ಪೂರ್ಣಗೊಂಡಿದ್ದು ಹೊಟೇಲ್ ಮ್ಯಾನೇಜರ್ ಮಹಾಂತೇಶ ಕುಲಕರ್ಣಿ ಹಾಗೂ ಮಾಲೀಕ ಮಾಹಿತಿ ನೀಡಿದರು .
ಹೋಟೆಲ್ ಹೊರಾಂಗಣ ಹಾಗೂ ಒಳಾಂಗಣದಲ್ಲಿ ರೇನ್ ಡ್ಯಾನ್ಸ್, ಡಿಜೆ ವ್ಯವಸ್ಥೆ ಮಾಡಿ, ಬಣ್ಣಬಣ್ಣದ ಬಲೂನ್ಗಳನ್ನು ಕಟ್ಟಿ, ದೀಪಾಲಂಕಾರ ಮಾಡಲಾಗಿದೆ. ಕಾಲೇಜು ವಿದ್ಯಾರ್ಥಿಗಳು, ಯುವಕರು ಹಾಗೂ ಕುಟುಂಬದ ಕೆಲವು ಸದಸ್ಯರು ಈಗಾಗಲೇ ಹೋಟೆಲ್, ರೆಸಾರ್ಟ್ಗಳನ್ನು ಮುಂಗಡವಾಗಿ ಕಾಯ್ದಿರಿಸಿದ್ದಾರೆ. ಕೆಲವು ಬಡಾವಣೆಗಳ ಯುವಕರು ರಾತ್ರಿ 12ರವರೆಗೂ ಡಿಜೆ ಹಚ್ಚಿ ಕುಣಿದು ಸಂಭ್ರಮಿಸಿ, ಹೊಸ ವರ್ಷವನ್ನು ಸ್ವಾಗತಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಬಗೆಬಗೆಯ ಸಿಡಿಮದ್ದುಗಳನ್ನು ಆಗಸದಲ್ಲಿ ಹಾರಿಸಿ ಸಂಭ್ರಮಿಸಲಿದ್ದಾರೆ.
ಬಹುತೇಕ ಬೇಕರಿ ಅಂಗಡಿಗಳಲ್ಲಿ ವೈವಿಧ್ಯಮಯ ಕೇಕ್ಗಳನ್ನು ಸಿದ್ಧಪಡಿಸಿ, ಒಪ್ಪವಾಗಿ ಜೋಡಿಸಿಡಲಾಗಿದೆ. ಗ್ರಾಹಕರು ತಮಗಿಷ್ಟವಾದ ವಿನ್ಯಾಸದ ಮಾದರಿ ತಿಳಿಸಿದರೆ, ಅದರಂತೆ ತಯಾರಿಸಿ ಕೊಡುತ್ತಿದ್ದಾರೆ. ಚಾಕಲೆಟ್, ಫೈನಾಪಲ್, ಸ್ಟ್ರಾಬೇರಿ, ವೆನಿಲ್ಲಾ, ಬಟರ್ ಸ್ಕಾಚ್, ಪಿಸ್ತಾ, ಕೋಲ್ಡ್ ಕೇಕ್ಗಳ ಖರೀದಿಯೂ ಜೋರಾಗಿ ನಡೆಯಲಿದೆ.
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸರು ಕಟ್ಟೆಚ್ಚರ ವಹಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯುತ್ತಿದ್ದವು ನಡೆಯಾದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎನ್ನುತ್ತಾರೆ ಹುಬ್ಬಳ್ಳಿ ಧಾರವಾಡ ಪೊಲೀಸ್
ಚನ್ನಮ್ಮ ವೃತ್ತ, ಕೊಪ್ಪೀಕರ್ ರಸ್ತೆ, ದುರ್ಗದ ಬೈಲ್ ಡಾ. ಬಿ.ಆರ್. ಅಂಬೇಡ್ಕರ್ ವೃತ್ತ ಹಾಗೂ ಧಾರ್ಮಿಕ ಸ್ಥಳಗಳಿರುವ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸಲು ನಿರ್ಧರಿಸಲಾಗಿದೆ. ರಸ್ತೆ ಅಪಘಾತ ತಪ್ಪಿಸಲೆಂದು ಮದ್ಯಪಾನ ಮಾಡಿದವರನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಲು ಕಾರ್ಯಕ್ರಮ ಆಯೋಜಿಸಿದವರಿಗೆ ವಾಹನದ ವ್ಯವಸ್ಥೆ ಮಾಡಲು ಪೊಲೀಸ್ ಇಲಾಖೆ ಸೂಚಿಸಿದೆ. ‘ನೂತನ ವರ್ಷಾಚರಣೆ ಎಲ್ಲರಿಗೂ ಖುಷಿ ತರಲಿ ಎಂಬುದು ನಮ್ಮ ಹಾರೈಕೆ.
ಕಲ್ಮೇಶ ಮಂಡ್ಯಾಳ ಎಐಎನ್ ಹುಬ್ಬಳ್ಳಿ