ಹುಬ್ಬಳ್ಳಿ: ಶಾಲಿಮಾರ್-ವಾಸ್ಕೋ ಅಮರಾವತಿ ಎಕ್ಸ್ಪ್ರೆಸ್ ರೈಲಿನಲ್ಲಿ ಸಾಗಿಸುತ್ತಿದ್ದ 19.12 ಲಕ್ಷ ರೂ. ಮೌಲ್ಯದ 20 ಕೆಜಿ 270 ಗ್ರಾಂ ಗಾಂಜಾವನ್ನು ರೈಲ್ವೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಗದಗದಿಂದ ಹುಬ್ಬಳ್ಳಿ ರೈಲ್ವೆ ನಿಲ್ದಾಣದತ್ತ ಬರುತ್ತಿದ್ದ ರೈಲಿನಲ್ಲಿ ಡಿ. 28ರಂದು ತಪಾಸಣೆ ಮಾಡಿ ಎರಡು ಟ್ರ್ಯಾಲಿ ಬ್ಯಾಗ್ಗಳಲ್ಲಿದ್ದ 19 ಬಂಡಲ್ಗಳ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಗಾಂಜಾ ಸಾಗಿಸುತ್ತಿದ್ದ ಆರೋಪಿತರು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದು, ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.